ಕಂಪ್ಲಿ: ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಕಲಬುರಗಿ ಶ್ರೀ ಶರಣಬಸವೇಶ್ವರ ಲೀಲಾಮೃತ ಪುರಾಣ ಪ್ರವಚನ ಭಾನುವಾರ ಮಹಾಮಂಗಲಗೊಂಡಿತು.
ಶ್ರೀ ಬೊಚ್ಚಯ್ಯಸ್ವಾಮಿ, ಗುರುಸಿದ್ಧ ಮರಿದೇವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ, ತುಂಗಭದ್ರಾ ನದಿಯಿಂದ ಶರಣಬಸವೇಶ್ವರರ ಪ್ರತಿಮೆ ಮೆರವಣಿಗೆ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯಗಳು ನಡೆದವು.
ಪಾಠಶಾಲೆ, ಸರ್ಕಾರಿ ಆಸ್ಪತ್ರೆ ಹಾಗೂ ಬಳ್ಳಾರಿಯ ಗೋಪಿ ರಕ್ತ ಭಂಡಾರ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಯಿತು
ಪಾಠಶಾಲೆ ಅಧ್ಯಕ್ಷ ಇಟಗಿ ಬಸವರಾಜಗೌಡ, ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಜಿ.ಎಚ್.ಶಶಿಧರಗೌಡ, ಟಿ.ಸುರೇಶಗೌಡ, ಅರವಿ ಅಮರೇಶ, ಗೌಳೇರು ಶೇಖರಪ್ಪ, ಅಳ್ಳಿ ನಾಗರಾಜ, ಕೆ.ಸಣ್ಣಶಿವಶರಣ, ಎಚ್.ಅಮರೇಶ, ಎಂ.ವಿಜಯಕುಮಾರ, ಕುಕನೂರ ಅಶೋಕ, ಸಜ್ಜನರ ಶರಣಪ್ಪ, ಘನಮಠದಯ್ಯಶಾಸ್ತ್ರಿ, ಅರವಿ ಬಸವನಗೌಡ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಎಸ್.ಎಂ.ನಾಗರಾಜಸ್ವಾಮಿ, ಸಿ.ಕೆ.ಶಿವಮೂರ್ತಿಸ್ವಾಮಿ, ಬಾಳೆಕಾಯಿ ಚನ್ನಬಸಪ್ಪ, ಪ್ರಮುಖರಾದ ಎಸ್.ಡಿ.ಬಸವರಾಜ, ಕೆ.ಎಂ.ಬಸವರಾಜಶಾಸ್ತ್ರಿ, ಅಕ್ಕಮಹಾದೇವಿ ಮಹಿಳಾ ಮಂಡಳಿ ಸದಸ್ಯೆಯರು, ವೀರಶೈವ ಸಮುದಾಯದವರು ಪಾಲ್ಗೊಂಡಿದ್ದರು.