ಕಂಪ್ಲಿ: ಉನ್ನತ ಸಾಧನೆಗೆ ಸೂಕ್ತ ತರಬೇತಿ, ಸಾಧನಾ ಕೌಶಲದ ಅಗತ್ಯವಿದೆ ಎಂದು ಜೆಸಿಐ ವಲಯ ತರಬೇತುದಾರ ಮೊಹಮ್ಮದ ವಾಸೀಮ್ ಫಯಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕ ಆಯೋಜಿಸಿದ್ದ ಜೆಸಿಐ ಭಾರತ ರಾಷ್ಟ್ರೀಯ ತರಬೇತಿ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಉನ್ನತ ಸಾಧನೆಗೆ ಉತ್ತಮ ಗುರಿ ಮಾರ್ಗದರ್ಶನ ಕುರಿತ ತರಬೇತಿ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಯುವಜನತೆ ಉತ್ತಮ ಸಂವಾದ, ಭಾಷೆಯ ಮೇಲೆ ಹಿಡಿತ, ಬರವಣಿಗೆ ಕೌಶಲ ಹೊಂದಲು ಸತತ ಶ್ರಮಿಸಬೇಕು. ಹೆಚ್ಚು ಅಂಕ ಗಳಿಕೆಯೊಂದಿಗೆ ಸ್ವ-ಉದ್ಯೋಗ ಕಂಡುಕೊಳ್ಳುವ ಯೋಜನೆ ರೂಪಿಸಿಕೊಳ್ಳಬೇಕು ಎಂದರು.
ಜೆಸಿಐ ಕಂಪ್ಲಿ ಸೋನಾ ಘಟಕದ ಅಧ್ಯಕ್ಷ ಬಿ.ರಸೂಲ್, ಪ್ರಾಚಾರ್ಯ ಬಾಲಾಜಿ ಎಂ.ಪಿ., ಸೋನಾದ ಪೂರ್ವಾಧ್ಯಕ್ಷ ಇಂದ್ರಜಿತ್‌ಸಿಂಗ್, ಪದಾಧಿಕಾರಿಗಳಾದ ಅಕ್ಕಿ ಜಿಲಾನ್, ಯೂಸುಫ್, ವೆಂಕಟಸಪ್ತಗಿರಿ, ಬಿ.ಎಚ್.ಎಂ.ಅಮರನಾಥ ಶಾಸ್ತ್ರಿ, ಸಹಾಯಕ ಪ್ರಾಧ್ಯಾಪಕರಾದ ಚಂದ್ರಶೇಖರ, ಟಿ.ಎಂ.ಆರ್.ರಾಜ್ಮಾ, ಡಾ.ಜೆ.ಕೃಷ್ಣ, ಡಾ.ಮಹೇಶ, ಡಾ.ಅನ್ನಪೂರ್ಣ ಗುಡದೂರ ಇತರರಿದ್ದರು.