ಕಂಪ್ಲಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನಿಲಯ ಪಾಲಕಿ ಕಾಳಮ್ಮ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಬಿ.ರಸೂಲ್, ವಸಂತ್, ಕೆ.ವಿರೂಪಾಕ್ಷಿ, ಸಂತೋಷ್, ಕೊಟ್ರಪ್ಪ ಸೋಗಿ, ಹೀನಾ ಕೌಸರ್ ಇತರರಿದ್ದರು. 
ಜಿಲ್ಲೆ

ಮಹಿಳೆಯರಿಗೆ ಸಾಕ್ಷರತೆ ಅಗತ್ಯ- ಶಿಕ್ಷಕ ವಸಂತ್

ಕಂಪ್ಲಿ: ಮಹಿಳೆಯರು ಶಿಕ್ಷಿತರಾದರೆ ಸರ್ವಾಂಗೀಣ ಪ್ರಗತಿ ಸಾಧಿಸಲು ಸಾಧ್ಯ ಎಂದು ಶಿಕ್ಷಕ ವಸಂತ್ ಹೇಳಿದರು.

ಎಂ.ಡಿ.ಕ್ಯಾಂಪಿನ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ, ಜೆಸಿಐ ಕಂಪ್ಲಿ ಸೋನಾ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಾಕ್ಷರತೆ ಅಗತ್ಯವಿದೆ ಎಂದರು.

ನಿಲಯ ಪಾಲಕಿ ಕಾಳಮ್ಮನನ್ನು ಗೌರವಿಸಲಾಯಿತು. ಸೋನಾದ ಅಧ್ಯಕ್ಷ ಬಿ.ರಸೂಲ್, ಪ್ರಮುಖರಾದ ಕೆ.ವಿರುಪಾಕ್ಷಿ, ಸಂತೋಷ್ ಕೊಟ್ರಪ್ಪ ಸೋಗಿ, ಹೀನಾ ಕೌಸರ್, ಅಮೃತಾ, ಡಿ.ಇಸ್ಮಾಯಿಲ್, ವೆಂಕಟಸಪ್ತಗಿರಿ, ಮನೋಜಕುಮಾರ್ ದಾನಪ್ಪ ಇತರರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರದ್ಧಾ ಮಹಿಳಾ ಜ್ಞಾನವಿಕಾಸ ಕೇಂದ್ರದಿಂದ ಪಟ್ಟಣದ ಆಂಜನೇಯ ದೇವಸ್ಥಾನ ಬಳಿ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಪದ್ಮಶ್ರೀ ಜೋಗತಿ ಮಂಜಮ್ಮ ಅವರ ಕುರಿತ ವಿಡಿಯೋ ಪ್ರದರ್ಶನ ನಡೆಯಿತು. ಸಮನ್ವಯಾಧಿಕಾರಿ ರೇಖಾ, ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ನಜ್ಮಾ, ಸೇವಾ ಪ್ರತಿನಿಧಿ ಮಾಲಾ, ಶಿಕ್ಷಕ ಎಸ್.ರಾಮಪ್ಪ, ಇತರರಿದ್ದರು.