ಕಂಪ್ಲಿ ತಾಲೂಕಿನ ಸಣಾಪುರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನಾನಾ ಕ್ಷೇತ್ರಗಳಲ್ಲಿನ ಸಾಧಕಿಯರನ್ನು ಗೌರವಿಸಲಾಯಿತು. ಶ್ರೀ ವೀರಭದ್ರೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಲತಾರೆಡ್ಡಿ, ಪುಸ್ತಕ ಬರೆಹಗಾರ್ತಿ ಉಮಾಶಂಕರಿ, ಒಕ್ಕೂಟದ ಕಾರ್ಯದರ್ಶಿ ಈಶ್ವರಿ, ಪ್ರಮುಖರಾದ ಹೊನ್ನೂರಮ್ಮ, ಪರಂಜ್ಯೋತಿ, ಮುಖ್ಯಪೇದೆ ಸಿಂಧೆವಾಲಾ ಇತರರಿದ್ದರು. 
ಜಿಲ್ಲೆ

ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಲಿ

ಶಾಮಸುಂದರ್ ಕೊಪ್ಪಳಕರ್

ಕಂಪ್ಲಿ: ತಾಲೂಕಿನ ನಂ.3ಸಣಾಪುರ ಗ್ರಾಪಂ ಕಚೇರಿ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ಒಕ್ಕೂಟದ ಅಧ್ಯಕ್ಷೆ ಲತಾರೆಡ್ಡಿ ಮಾತನಾಡಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆಯಿಂದ ವೈಯಕ್ತಿಕ ಮತ್ತು ಕೌಟುಂಬಿಕ ಪ್ರಗತಿ ಸಾಧಿಸಲು ಸಾಧ್ಯ. ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸ್ವಸಹಾಯ ಗುಂಪುಗಳಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು.

ಡಾ.ಷಂಷದ್‌ಬೇಗಮ್, ಸಿಎಚ್‌ಒ ಕಲ್ಯಾಣಿ, ಸಿಎಚ್‌ಸಿ ನೇತ್ರ ಅಧಿಕಾರಿ ಪ್ರಕಾಶಗೌಡ ಕಣ್ಣಿನ ತಪಾಸಣೆ ಮಾಡಿದರು. ಮಕ್ಕಳ ರಕ್ಷಣ ಅಧಿಕಾರಿ ಚನ್ನಬಸಪ್ಪ ಪಾಟೀಲ್ ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು. ನಾನಾ ಕ್ಷೇತ್ರದ ಸಾಧಕಿಯರನ್ನು ಗೌರವಿಸಲಾಯಿತು. ಗ್ರಾಪಂ ಅಧ್ಯಕ್ಷ ವೈ.ರಮಣಯ್ಯ, ಪಿಡಿಒ ಹಾಲಹರವಿ ಶೇಷಗಿರಿ ಇತರರಿದ್ದರು.