ಕಲ್ಯಾಣ ಮಹೋತ್ಸವದ ನಿಮಿತ್ತ ಕಂಪ್ಲಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಪ್ರತಿಮೆಯನ್ನು ಅಲಂಕರಿಸಿರುವುದು. 
ಜಿಲ್ಲೆ

ಕಂಪ್ಲಿಯಲ್ಲಿ ಕಲ್ಯಾಣ ಮಹೋತ್ಸವ

ಕಂಪ್ಲಿ: ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ (ಗುಡ್ಡದ ತಿಮ್ಮಪ್ಪ) ದೇವಸ್ಥಾನದಲ್ಲಿ ಶನಿವಾರ ಕಲ್ಯಾಣ ಮಹೋತ್ಸವ ನೆರವೇರಿತು.

ಅರ್ಚಕ ಬೋಸಿ ಪವನ್ ಕುಮಾರ್ ಪೌರೋಹಿತ್ಯದಲ್ಲಿ ಪಂಚಾಮೃತ ಅಭಿಷೇಕ, ಊಂಜಲ ಸೇವೆ, ಮಹಾಮಂಗಳಾರತಿ, ಲಕ್ಷ್ಮೀ-ವೆಂಕಟೇಶ್ವರಸ್ವಾಮಿ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆದವು.

ರಾಯರ ಶಾಖಾ ಮಠದ ಕಲ್ಯಾಣಮಂಟಪದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರಾದ ಡಿ.ಶ್ರೀಧರ ಶ್ರೇಷ್ಠಿ, ವಿ.ರಾಮಲಿಂಗಯ್ಯ, ಬಾಲ ವೆಂಕಟೇಶಲು ಇತರರಿದ್ದರು.