ಕಂಪ್ಲಿ: ಆರೋಗ್ಯ ಇಲಾಖೆಯ ಯೋಜನೆಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಹೇಳಿದರು.
ಹಳೆನೆಲ್ಲೂಡಿ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಗ್ರಾಮಸ್ಥರು ಆರೋಗ್ಯ ಇಲಾಖೆಯ ಯೋಜನೆಗಳನ್ನು ಅರಿತುಕೊಳ್ಳಬೇಕು ಎಂದರು. ಗ್ರಾಪಂ.ಸದಸ್ಯೆ ರುದ್ರಮ್ಮ ಹಲಗೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹದಿಹರೆಯದವರ ಸಮಸ್ಯೆ, ಪೌಷ್ಟಿಕ ಆಹಾರ, ಎದೆ ಹಾಲಿನ ಮಹತ್ವ, 108, ಹಕ್ಕಿ ಜ್ವರ, ಬಿಸಿಲ ತಾಪದ ಮುಂಜಾಗ್ರತೆ ಕ್ರಮ ಸೇರಿದಂತೆ ನಾನಾ ಯೋಜನೆಗಳ ಕುರಿತು ಸಿರಗುಪ್ಪದ ನೇತ್ರ ಕಲಾ ಸಂಘ ಜನಪದ ಕಲಾತಂಡದದಿಂದ ಹಾಡು, ಅಭಿನಯ ಮೂಲಕ ಜಾಗೃತಿ ಮೂಡಿಸಲಾಯಿತು.