ಕಂಪ್ಲಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದಿ ಆಯ್ಕೆಯಾದ ಅಳ್ಳಿ ನಾಗರಾಜ ಮತ್ತು ಉಪಾಧ್ಯಕ್ಷ ರಾಗಿ ಆಯ್ಕೆಯಾದ ಡಿ.ಮುರಾರಿ ಅವರನ್ನು ಶುಕ್ರವಾರ ಸನ್ಮಾಸಲಾಯಿತು.  
ಜಿಲ್ಲೆ

ಅಳ್ಳಿ ನಾಗರಾಜ, ಡಿ.ಮುರಾರಿ ಅವಿರೋಧ ಆಯ್ಕೆ

ಶಶಿಧರ ಎಲ್

ಕಂಪ್ಲಿ: ಇಲ್ಲಿನ ಮುದ್ದಾಪುರ ಅಗಸಿ ಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಅಳ್ಳಿ ನಾಗರಾಜ, ಉಪಾಧ್ಯಕ್ಷರಾಗಿ ಡಿ.ಮುರಾರಿ ಶುಕ್ರವಾರ ಅವಿರೋಧವಾಗಿ ಆಯ್ಕೆಗೊಂಡರು.

ಬಳೆ ವೀರೇಶ್, ಶೆರೆಗಾರ ರಾಜೇಶ್ ರಾಜೀನಾಮೆಯಿಂದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳು ತೆರವಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಅಳ್ಳಿ ನಾಗರಾಜ, ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಮುರಾರಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಡಿಆರ್‌ಒ ಕಚೇರಿಯ ಸಿಬ್ಬಂದಿ ನೂರ್‌ಮಹ್ಮದ್ ಘೋಷಿಸಿದರು.

ಮುಖ್ಯಕಾರ್ಯನಿರ್ವಾಹಕ ಎಚ್.ಈರಣ್ಣ, ಸದಸ್ಯರಾದ ಜೆ.ಈರಪ್ಪ, ಕೆ.ಮಲ್ಲಿಕಾರ್ಜುನ, ರಾಜೇಶ್, ಬಸವರಾಜ, ಕಟ್ಟೆ ಸಣ್ಣದುರುಗಪ್ಪ, ಬಿ.ರಮೇಶ್, ಪಾರ್ವತಿ, ವಿಶಾಲಾಕ್ಷಿ, ಸಿಬ್ಬಂದಿ ಇಟಗಿ ಈರಣ್ಣ, ಎಚ್.ಪರಶುರಾಮ, ಎನ್.ಮಂಜುನಾಥ, ಕೆ.ಪ್ರಕಾಶ್, ಎಚ್.ಸಿದ್ದೇಶ್, ಯು.ಮಂಜುನಾಥ, ಕೆ.ಭರತ್, ಸೋಮನಾಥ ಇತರರಿದ್ದರು.