ಕಂಪ್ಲಿಯಲ್ಲಿ ಶಿವಶರಣ ಹೇರೂರು ವಿರುಪಣ್ಣಗೌಡ ತಾತನವರ ಗಂಗೆಸ್ಥಳ ಮೆರವಣಿಗೆ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು. ಸದ್ಭಕ್ತರಾದ ಸಿ.ಎಂ.ವೀರಯ್ಯಸ್ವಾಮಿ, ಯು.ವೆಂಕಟೇಶ್, ಯು.ವಿರುಪಣ್ಣ, ವಾಲ್ಮೀಕಿ ಈರಣ್ಣ, ಗುರಿಕಾರ ದುರುಗಪ್ಪ ಇತರರಿದ್ದರು. 
ಜಿಲ್ಲೆ

ಹೇರೂರು ವಿರುಪಣ್ಣ ತಾತನ ಗಂಗೆಸ್ಥಳ ಮೆರವಣಿಗೆ

ಕಂಪ್ಲಿ: ಇಲ್ಲಿನ ಶಿವಶರಣ ಹೇರೂರು ವಿರುಪಣ್ಣಗೌಡ ತಾತನ ಗಂಗೆಸ್ಥಳ ಮೆರವಣಿಗೆ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು. ತುಂಗಭದ್ರಾ ನದಿ ತೀರದ ಗಂಗಮ್ಮನಕಟ್ಟೆಯಿಂದ ಆರಂಭಗೊಂಡ ಮೆರವಣಿಗೆ, ಪ್ರಮುಖ ಬೀದಿಗಳಲ್ಲಿ ಸಾಗಿ ತಾತನ ಮಠದ ಆವರಣದಲ್ಲಿ ಸಮಾವೇಶಗೊಂಡಿತು.

ಮಂಗಳವಾಧ್ಯ, ಪೂರ್ಣಕುಂಭ, ಹೇರೂರು ವಿರುಪಣ್ಣ ತಾತನ ಭಜನಾ ಮಂಡಳಿ, ಕೊಪ್ಪಳ ಜಿಲ್ಲೆಯ ಬೈಲಕ್ಕಂಪುರ ಮಾರುತೇಶ್ವರ ಭಜನಾ ಸಂಘದವರು ಪಾಲ್ಗೊಂಡಿದ್ದರು. ತಾತನ ಕರ್ತೃ ಗದ್ದೆಗೆಗೆ ಮಹಾರುದ್ರಾಭಿಷೇಕ, ಅನ್ನ ಸಂತರ್ಪಣೆ ಸೇರಿ ನಾನಾ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಶಿವದ್ವೈತ ಶಿವಶರಣ ವಿರುಪಣ್ಣ ತಾತನವರ ಸದ್ಭಕ್ತ ಸೇವಾ ಸಂಘದ ಅಧ್ಯಕ್ಷ ಡಿ.ವಿ.ರಮೇಶ್‌ಗುಪ್ತಾ, ಪದಾಧಿಕಾರಿಗಳಾದ ಉಬಾಳೆ ನಾಗರಾಜ, ವಿ.ನೀಲಕಂಠ, ಅಂಚೆ ಮಾಬುಸಾಬ್, ಸಿ.ಎಂ.ವೀರಯ್ಯಸ್ವಾಮಿ, ಯು.ವೆಂಕಟೇಶ್, ಚಾಗಿ ಮಂಜುನಾಥ, ಯು.ವಿರುಪಣ್ಣ, ಎಸ್.ವೆಂಕಟೇಶ್, ನಡವಿ ಬಸವರಾಜ್, ಎನ್.ಭೀಮಪ್ಪ, ಜೀರು ಈಶಪ್ಪ, ವಾಲ್ಮೀಕಿ ಈರಣ್ಣ, ಲಿಂಗಪ್ಪ, ಅತ್ನಿ ಬಸವರಾಜ, ದುರುಗಪ್ಪ ಗುರಿಕಾರ, ವಿರುಪಣ್ಣ ದೇಸಾಯಿ, ಭೀಮಣ್ಣ ಗೌಡ್ರು, ವಿರುಪಣ್ಣ ಗರ್ಜಿಹಾಳ್, ಕೊಪ್ಪಳ ಜಿಲ್ಲೆಯ ಬೈ ಲಕ್ಕಂಪುರ ಹಾಗೂ ಬಳ್ಳಾರಿ ಜಿಲ್ಲೆಯ ಪಾದಯಾತ್ರಿಗಳು ಭಾಗವಹಿಸಿದ್ದರು.