ಪಿಂಚಣಿ ಪರಿಷ್ಕರಣೆ ನೀತಿ ಖಂಡಿಸಿ ಕಂಪ್ಲಿಯಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ತಾಲೂಕು ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ, ಪದಾಧಿಕಾರಿಗಳಾದ ಟಿ.ಶಶಿಧರ, ಬಿ.ವೀರಣ್ಣ, ಬಿ.ವೀರೇಶಪ್ಪ, ಪಿ.ಸೋಮಪ್ಪ ಇತರರಿದ್ದರು. 
ಜಿಲ್ಲೆ

ಪಿಂಚಣಿ ಪರಿಷ್ಕರಣೆ ನೀತಿ ಕೈಬಿಡಿ

ಕಂಪ್ಲಿ: ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಪಿಂಚಣಿ ಪರಿಷ್ಕರಣೆ ನೀತಿ ಖಂಡಿಸಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಸೋಮವಾರ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ ಮಾತನಾಡಿ, ಕೇಂದ್ರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ವೇತನವನ್ನು ಪರಿಷ್ಕರಿಸಲು ಈಗಾಗಲೇ 8ನೇ ವೇತನ ಆಯೋಗ ರಚನೆಯಾಗಿದ್ದು ಕಾರ್ಯತತ್ಪರವಾಗಿದೆ.

ಇತ್ತೀಚೆಗೆ ಆರ್ಥಿಕ ಬಿಲ್ ಮಂಡಿಸುವಾಗ 2026ರ ಏ.1ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಪಿಂಚಣಿ, ಕುಟುಂಬ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ಸಚಿವೆ ನಿರ್ಮಲ ಸೀತಾರಾಮ್ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು ಖಂಡನೀಯ.

ಆರ್ಥಿಕ ಸಚಿವೆ ಹೇಳಿಕೆ ಸರ್ಕಾರಿ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗೆ ಆರ್ಥಿಕ ಸಂಕಷ್ಟ ಉಂಟಾಗುವಂತಿದೆ. ಈ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಟಿ.ಶಶಿಧರ, ಬಿ.ವೀರಣ್ಣ, ಬಿ.ವೀರೇಶಪ್ಪ, ಪಿ.ಸೋಮಪ್ಪ, ಎ.ವೆಂಕಟೇಶ, ಬಿ.ಬೆಟ್ಟಪ್ಪ, ನರಸಿಂಹಲು, ಅಮರೇಶಪ್ಪ, ಬಿ.ಮಲ್ಲಪ್ಪ, ಜಿ.ಗಂಗಾಧರಗೌಡ, ಸಿ.ಚನ್ನಬಸಪ್ಪ, ವಿ.ಪಕ್ಕೀರಪ್ಪ, ಕೆ.ರೇವಣಸಿದ್ದಪ್ಪ, ಪಿ.ಚಂದ್ರಪ್ಪ, ನಾಗೇಶ್ವರರಾವ್, ಸತ್ಯಶೀಲನಗೌಡ, ಎ.ಗುರುಮೂರ್ತಿ, ವೀರಯ್ಯಸಾಲಿಮಠ, ಎಸ್.ಸೋಮಶೇಖರ, ಎಸ್.ಚಿದಾನಂದಪ್ಪ, ಕೆ.ಹಾಲಪ್ಪ, ಎಸ್.ವೀರಭದ್ರಪ್ಪ ಇತರರಿದ್ದರು.