ಕಂಪ್ಲಿಯಲ್ಲಿ ನಡೆದ ಶಸಾಪ ಮಹಾಮನೆಯಲ್ಲಿ ಶಿಕ್ಷಕ ನಾರನಗೌಡ ದ್ಯಾಮನಗೌಡ ಮಾತನಾಡಿದರು. 
ಜಿಲ್ಲೆ

ಜಾಗತಿಕ ಪ್ರಸಿದ್ಧಿ ಪಡೆದಿದ್ದ ಕಲ್ಯಾಣಕ್ರಾಂತಿ- ಸಕಿಪ್ರಾ ಶಾಲೆ ಶಿಕ್ಷಕ ನಾರನಗೌಡ ದ್ಯಾಮನಗೌಡ ಹೇಳಿಕೆ

ಕಂಪ್ಲಿ: ಕಲ್ಯಾಣದ ಕ್ರಾಂತಿಗೆ ಶರಣ ಹರಳಯ್ಯ ಕಲ್ಯಾಣಮ್ಮ ದಂಪತಿಯ ಭಕ್ತಿಭಾವ ನಿಷ್ಕಾಮದಿಂದ ಕೂಡಿದ್ದು ಮೇರುಪಂಕ್ತಿಯಲ್ಲಿದೆ ಎಂದು ದೇವಸಮುದ್ರ ಆಶ್ರಯ ಕಾಲನಿಯ ಸಕಿಪ್ರಾ ಶಾಲೆ ಶಿಕ್ಷಕ ನಾರನಗೌಡ ದ್ಯಾಮನಗೌಡ ಹೇಳಿದರು.

ಗಂಗಾಸಂಕೀರ್ಣದಲ್ಲಿ ಶರಣ ಸಾಹಿತ್ಯ ಪರಿಷತ್ ಸೋಮವಾರ ಹಮ್ಮಿಕೊಂಡಿದ್ದ 149ನೇ ಮಹಾಮನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕಲ್ಯಾಣಕ್ರಾಂತಿ ಜಾಗತಿಕ ಪ್ರಸಿದ್ಧವಾಗಿದ್ದು. ಸರ್ವಸಮತೆಯ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಿದೆ. ಕಲ್ಯಾಣಕ್ರಾಂತಿಯ ವಿಚಾರಧಾರೆಗಳು ಆಧುನಿಕ ಜಗತ್ತಿನ ನಿರ್ಮಾಣಕ್ಕೆ ಮೂಲ ತತ್ವಾದರ್ಶಗಳಾಗಿವೆ ಎಂದರು.

ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್ ಶಿಕ್ಷಕ ಡಾ.ಬಿ.ಸುನೀಲ್ ಮಾತನಾಡಿ, ಶರಣರ ವಿಚಾರಗಳಲ್ಲಿ ವೈಜ್ಞಾನಿಕ ಮನೋಭಾವನೆಗಳಿದ್ದು ಅರ್ಥೈಸಿಕೊಳ್ಳಬೇಕಿದೆ ಎಂದರು. ಶಸಾಪ ತಾಲೂಕಾಧ್ಯಕ್ಷ ಜಿ.ಪ್ರಕಾಶ್, ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ಪ್ರಮುಖರಾದ ಕೆ.ಚಂದ್ರಶೇಖರ್, ಎಸ್.ಡಿ.ಬಸವರಾಜ, ಕೃಷ್ಣ ಎಸ್.ಪೋಳ್, ಈರಪ್ಪ ಸೊರಟೂರು, ಎಲಿಗಾರ ವೆಂಕಟರೆಡ್ಡಿ, ರಾಮಚಂದ್ರ ಚಿತ್ರಗಾರ್, ಮುದುಕಪ್ಪ ನೆಲಜೇರಿ, ಶಂಕ್ರಪ್ಪ, ಅಮರನಾಥಶಾಸ್ತ್ರಿ, ಬಂಗಿ ದೊಡ್ಡ ಮಂಜುನಾಥ ಇತರರಿದ್ದರು.