ಕಂಪ್ಲಿ: ಅನಾರೋಗ್ಯಕ್ಕೆ ಆಧುನಿಕ ಜೀವನ ಶೈಲಿಯೂ ಕಾರಣವಾಗಿದೆ ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಯೋಗ ದೊಂದಿಗೆ ಆಯೋಜಿಸಿದ್ದ ಹೃದ್ರೋಗ, ಮಂಡಿಚಿಪ್ಪು ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ರಾಸಾಯನಿಕ ಮಿಶ್ರಿತ, ಫಾಸ್ಟ್‌ಫುಡ್, ಜಂಕ್‌ಫುಡ್ ಸೇವನೆಯಿಂದ ದೂರವಿದ್ದಲ್ಲಿ ನಾನಾ ರೋಗ ಗಳಿಂದ ದೂರವಿರಲು ಸಾಧ್ಯ ಎಂದರು.
375ಕ್ಕೂ ಹೆಚ್ಚು ಜನರ ಹೃದಯ, ಮಂಡಿಚಿಪ್ಪು ಆರೋಗ್ಯದ ತಪಾಸಣೆ ಮಾಡಲಾಯಿತು. ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಜೆ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ಪಿ.ಸಿ.ಜಗದೀಶ್, ಡಾ.ನಾಹೀನ್, ಪ್ರಮುಖ ರಾದ ಪಿ.ಮೂಕಯ್ಯ ಸ್ವಾಮಿ, ಕೆ.ಎಂ.ಹೇಮಯ್ಯಸ್ವಾಮಿ, ಇಟಗಿ ಬಸವರಾಜಗೌಡ, ಡಾ.ವೆಂಕಟೇಶ್ ಸಿ. ಭರಮಕ್ಕನವರ್, ಎಂ.ಎಸ್.ಶಶಿಧರಶಾಸ್ತ್ರಿ, ಎನ್. ರಾಮಾಂಜನೇಯಲು, ಡಿ.ಆರ್. ಮಂಜುನಾಥ, ಎಲ್.ರಾಘವೇಂದ್ರ, ಸಂಜುಕುಮಾರ್, ರೇಖಾ ಇತರರಿದ್ದರು.