ಕಂಪ್ಲಿಯ ಎಸ್‌ಜಿವಿಎಸ್‌ಎಸ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿದರು.  
ಜಿಲ್ಲೆ

ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು- ಶಾಸಕ ಜೆ.ಎನ್.ಗಣೇಶ್ ಮನವಿ

ಕಂಪ್ಲಿ: ರೈತರು ಎಂತಹದೆ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಶಾಸಕ ಜೆ.ಎನ್.ಗಣೇಶ್ ಮನವಿ ಮಾಡಿದರು.

ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಗುರುವಾರ, 2021-22ನೇ ಸಾಲಿನ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನ ಯೋಜನೆಯಡಿ 10ಲಕ್ಷ ರೂ.ಗಳಲ್ಲಿ ಬಾಸ್ಕೇಟ್‌ಬಾಲ್ ಕೋರ್ಟ್ ನಿರ್ಮಾಣಕ್ಕೆ ಚಾಲನೆ ನೀಡಿ, ರೈತರು ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಮುಂದಾಗಬಾರದು. ಸರ್ಕಾರವು ಹೆಕ್ಟರ್ ಮೆಣಸಿನಕಾಯಿ ಬೆಳೆಗೆ 25ಸಾವಿರ ರೂ. ಪರಿಹಾರ ಧನ ನೀಡಬೇಕು. ಕುಡಿವ ನೀರಿಗೆ ಕಾಂಗ್ರೆಸ್ ಹಮ್ಮಿಕೊಂಡ ಮೇಕೆದಾಟು ಪಾದಯಾತ್ರೆ ಸಮಂಜಸವಾಗಿದ್ದು ಯಶಸ್ಸುಗೊಳ್ಳಲಿದೆ ಎಂದರು. ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನ ಯೋಜನಡಿ 10ಲಕ್ಷ ರೂ.ಗಳಲ್ಲಿ ಎಸ್‌ಜಿವಿಎಸ್‌ಎಸ್ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗಾಗಿ ಬಾಸ್ಕೆಟ್‌ಬಾಲ್ ಕೋರ್ಟ್, 25ಲಕ್ಷ ರೂ.ಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಟಲ್‌ಕಾಕ್ ಕೋರ್ಟ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಪ್ರಾಚಾರ್ಯರಾದ ಇಂದ್ರಿಪಿ ಮಲ್ಲಿಕಾರ್ಜುನ, ಮಹ್ಮದ್ ಶಫಿ, ಬಸವರಾಜ ಪಾಟೀಲ್, ಎಚ್.ಚಂದ್ರಶೇಖರ್, ಕೆ.ಎಂ.ಸರಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜಗೌಡ, ಯೂತ್ ಅಧ್ಯಕ್ಷ ಆರ್.ಪಿ.ಶಶಿಕುಮಾರ್, ಪ್ರಮುಖರಾದ ಭಟ್ಟ ಪ್ರಸಾದ್, ಕೆ.ಷಣ್ಮುಖಪ್ಪ, ಎಂ.ಸುಧೀರ್, ವೈ.ಅಬ್ದುಲ್ ಮುನಾಫ್, ಕರಿಬಸವನಗೌಡ, ಬಿ.ಜಾಫರ್, ಕೆ.ಮನೋಹರ ಇತರರಿದ್ದರು.