ಕಂಪ್ಲಿಯ 33/11ಕೆವಿ ಮಾಸ್ಟರ್ ಯೂನಿಟ್ ಸಬ್‌ಸ್ಟೇಷನ್ ಎಇ ಎ.ಷಣ್ಮುಖಪ್ಪಗೆ ಮಂಗಳವಾರ ಮನವಿ ಸಲ್ಲಿಸಿದ ರೈತರು, ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.  
ಜಿಲ್ಲೆ

ರೈತರಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ಕೊಡಲು ಕರ್ನಾಟಕ ರೈತ ಸಂಘದ ತಾಲೂಕು ಘಟಕ ಒತ್ತಾಯ

ಕಂಪ್ಲಿ: ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಬೇಕು ಎಂದು ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಜಿ.ಬಲಕುಂದೆಪ್ಪ ಆಗ್ರಹಿಸಿದರು. ಇಲ್ಲಿನ ಜೆಸ್ಕಾಂ ಕಚೇರಿ ಆವರಣದಲ್ಲಿನ 33/11ಕೆವಿ ಮಾಸ್ಟರ್ ಯೂನಿಟ್ ಸಬ್‌ಸ್ಟೇಷನ್ ಎಇ ಎ.ಷಣ್ಮುಖಪ್ಪಗೆ ಮಂಗಳವಾರ ಮನವಿ ಸಲ್ಲಿಸಿದರು.

ರಾಮಸಾಗರ, ಮುದ್ದಾಪುರ ಮತ್ತು ಕಣವಿ ತಿಮ್ಮಲಾಪುರ ಗ್ರಾಮಗಳಲ್ಲಿ ಪಾಳೆಯಂತೆ ಹಗಲು, ರಾತ್ರಿ ವಿದ್ಯುತ್ ಪೂರೈಸಲಾಗುತ್ತಿದೆ. ರಾತ್ರಿ ವಿದ್ಯುತ್ ಪೂರೈಸಿದಲ್ಲಿ ಹೊಲಗದ್ದೆಗಳಿಗೆ ತೆರಳಿ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವನ್ಯಜೀವಿ, ವಿಷಜಂತುಗಳ ಭಯವಿದೆ. ರಾತ್ರಿ ಬದಲಿಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 4 ಗಂಟೆ ವರೆಗೆ, ಬೆಳಗ್ಗೆ 11ರಿಂದ ಸಂಜೆ 6ಗಂಟೆ ವರೆಗೆ ಪಾಳಿ ಪ್ರಕಾರ ವಿದ್ಯುತ್ ಪೂರೈಸಬೇಕು. ಆರು ದಿನದೊಳಗಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ಬಿ.ವಾಬಣ್ಣ, ಎಸ್.ಬಸವರಾಜ್, ಎಚ್.ಬಸಪ್ಪ, ಜಿ.ರಾಮಾಂಜಿನಿ, ಜಿ.ನಾರಾಯಣ, ಎನ್.ವೆಂಕಟೇಶ್, ಮಣಿಕುಮಾರ್, ಉಮೇಶ್, ದೊಡ್ಡ ಬಸಪ್ಪ, ಪಂಪಾಪತಿ, ಮಹೇಶ್, ಗೋಪಾಲ್ ಇತರರಯ ಇದ್ದರು.