ಕಂಪ್ಲಿಯ ಸಮುದಾಯ ಆರೋಗ್ಯ ಕೇಂದ್ರದ ಆವರಣ ಗೋಡೆಯುದ್ದಕ್ಕೂ ಪಾದಚಾರಿ ರಸ್ತೆ ಅತಿಕ್ರಮಿಸಿ ನಿರ್ಮಿಸಿಕೊಂಡಿದ್ದ ಗೂಡಂಗಡಿಗಳನ್ನು ಪುರಸಭೆಯಿಂದ ಮಂಗಳವಾರ ತೆರವುಗೊಳಿಸಲಾಯಿತು. 
ಜಿಲ್ಲೆ

ಒತ್ತುವರಿ ತೆರವು ಕಾರ್ಯ ಮುಂದುವರಿಕೆ

ನರೇಶ್ ಕುಮಾರ್

ಕಂಪ್ಲಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಪಾದಚಾರಿ ರಸ್ತೆ ಅತಿಕ್ರಮಿಸಿಕೊಂಡು ನಿರ್ಮಿಸಿಕೊಂಡಿದ್ದ ತಳ್ಳುವ ಬಂಡಿ, ಗೂಡಂಗಡಿ, ಶೆಡ್‌ಗಳ ತೆರವು ಕಾರ್ಯ ಪುರಸಭೆಯಿಂದ ಮಂಗಳವಾರವೂ ಮುಂದುವರೆಯಿತು.

ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ಹಂತ, ಹಂತವಾಗಿ ಪಾದಚಾರಿ ರಸ್ತೆ ಅತಿಕ್ರಮಣ ತೆರವುಗೊಳಿಸಲಾಗುವುದು. ಪಾದಚಾರಿ ರಸ್ತೆಯನ್ನು ಯಾರೂ ಒತ್ತುವರಿ ಮಾಡಬಾರದು. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.

ಪುರಸಭೆ ಆರೋಗ್ಯ ನಿರೀಕ್ಷಕ ಪ್ರಕಾಶ್‌ಬಾಬು, ಮೇಸ್ತ್ರಿಗಳಾದ ವೆಂಕಟೇಶ್, ಒಬಳೇಶ್, ಕಿರಿಯ ಆರೋಗ್ಯ ನಿರೀಕ್ಷಕಿ ಜೀವನ್‌ಸ್ವಾತಿ ಸೇರಿ ಪೌರ ಕಾರ್ಮಿಕರು ಇದ್ದರು. ಪಟ್ಟಣದ ಸಣಾಪುರ ಗ್ರಾಮಕ್ಕೆ ತೆರಳುವ ಮಾರ್ಗದ ಪಾದಚಾರಿ ರಸ್ತೆಯಲ್ಲಿ ನಿರ್ಮಿಸಿದ್ದ ಡಬ್ಬಿ ಗೂಡಂಗಡಿಗಳನ್ನು ಶುಕ್ರವಾರ ತೆರವುಗೊಳಿಸಲಾಗಿತ್ತು.