ಎಮ್ಮಿಗನೂರಿನಲ್ಲಿ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಕೆವಿಕೆ ಹಿರಿಯ ವಿಜ್ಞಾನಿ ಡಾ.ಪಿ.ಪಾಲಯ್ಯ ಮಾತನಾಡಿದರು. ಪ್ರಮುಖರಾದ ಡಾ.ನವೀನ್‌ಕುಮಾರ್, ಟಿ.ಜ್ಯೋತಿ, ಡಾ.ಡೇವಿಡ್ ಕೆ.ಜೆ., ರೈತರು ಇದ್ದರು. 
ಜಿಲ್ಲೆ

ಸಮಸ್ಯೆಗಳನ್ನು ಪರಿಹರಿಸಿಕೊಂಡು ಸ್ವಾವಲಂಬನೆ ಸಾಧಿಸಿ

ಶ್ರೀನಾಥ

ಕಂಪ್ಲಿ: ಕೃಷಿ ಜ್ಞಾನವನ್ನು ನೇರವಾಗಿ ರೈತರ ಬಳಿಗೆ ಕೊಂಡ್ಯೊಯುವುದು ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಕೆವಿಕೆ ಹಿರಿಯ ವಿಜ್ಞಾನಿ ಡಾ.ಪಿ.ಪಾಲಯ್ಯ ಹೇಳಿದರು.

ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಮಂಗಳವಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದರು. ರೈತರು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಸಮಸ್ಯೆಗಳನ್ನು ವಿಜ್ಞಾನಿಗಳಿಗೆ ತಲುಪಿಸಬೇಕಿದೆ.

ಹಗರಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ತಂಡ ಜೂ.12 ರವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಕೃಷಿ ಜ್ಞಾನ ಕುರಿತು ತಿಳಿವಳಿಕೆ ನೀಡಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬೆಂಗಳೂರಿನ ನ್ಯಾಷನಲ್ ಬ್ಯೂರೋ ಆಫ್ ಅಗ್ರಿಕಲ್ಚರಲ್ ಇನ್‌ಸೆಕ್ಟ್ ರಿಸರ್ಚ್ ವಿಜ್ಞಾನಿ ಡಾ.ಡೇವಿಡ್ ಕೆ.ಜೆ ಭತ್ತದ ಬೆಳೆಯಲ್ಲಿ ಸಮಗ್ರ ರೋಗ ಹಾಗೂ ಕೀಟ ನಿಯಂತ್ರಣ ಜತೆಗೆ ಸಾವಯವ ಕೃಷಿ ಪದ್ದತಿಯಲ್ಲಿ ಜೈವಿಕ ಕೀಟನಾಶಕ ಹಾಗೂ ಸಸ್ಯಜನ್ಯ ಪಿಡೇನಾಶಕಗಳ ಬಳಕೆಯ ಬಗ್ಗೆ ರೈತರಿಗೆ ತಿಳಿಸಿದರು. ವಿಜ್ಞಾನಿಗಳಾದ ಡಾ.ಪಿ.ನವೀನ್ ಕುಮಾರ್, ಕಂಪ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಟಿ.ಜ್ಯೋತಿ ಇತರರಿದ್ದರು.