ಕಂಪ್ಲಿ: ದೇವಲಾಪುರ ಗ್ರಾಮ ಹೊರವಲಯದ ಕಣಿವೆ ಮಾರೆಮ್ಮ ದೇವಸ್ಥಾನ ಬಳಿ ಕುಂಬಾರಕುಂಟೆ ಪ್ರದೇಶದಲ್ಲಿ ಇಟ್ಟಿದ್ದ ಬೋನಿಗೆ ಮಂಗಳವಾರ ಕರಡಿಯೊಂದು ಸೆರೆ ಬಿದ್ದಿದೆ.
ನಾಲ್ಕಾರು ದಿನಗಳಿಂದ ಕಣಿವೆ ಮಾರೆಮ್ಮ ದೇವಸ್ಥಾನ ಬಳಿಯ ಹೊಲಗದ್ದೆಗಳ ಮೇಲೆ ಕರಡಿಗಳು ದಾಳಿ ಮಾಡಿ ಮೆಕ್ಕೆಜೋಳ ಬೆಳೆ ಹಾಳು ಮಾಡುತ್ತಿದ್ದವು. ಸ್ಥಳೀಯರ ಒತ್ತಾಯದ ಮೇರೆಗೆ ಕರಡಿಧಾಮದವರು ಬೋನ್ ಇರಿಸಿದ್ದರು. ಮಂಗಳವಾರ ಕರಡಿ ಬೋನಿಗೆ ಬೀಳುತ್ತಿದ್ದಂತೆ ದೇವಲಾಪುರ ಗ್ರಾಮಸ್ಥರು ತಂಡೋಪತಂಡವಾಗಿ ದೌಡಾಯಿಸಿದ್ದರು. ಈ ಭಾಗದಲ್ಲಿ ಇನ್ನಷ್ಟು ಕರಡಿಗಳಿದ್ದು ಸೆರೆ ಹಿಡಿದು ದೂರ ಸಾಗಿಸುವಂತೆ, ಹೊಲ ಗದ್ದೆಗಳಿಗೆ ನುಗ್ಗದಂತೆ ತಂತಿ ಅಳವಡಿಸಬೇಕೆಂದು ಗ್ರಾಪಂ ಮಾಜಿ ಅಧ್ಯಕ್ಷ ಗೌಡ್ರು ಸುರೇಶಗೌಡ್ರು ಸೇರಿ ಇತರರು ಆಗ್ರಹಿಸಿದ್ದಾರೆ. ಸೆ.28ರಂದು ಮೆಕ್ಕೆಜೋಳ ಬೆಳೆ ಹಾನಿ ಕುರಿತು ವಿಜಯವಾಣಿ ವರದಿ ಪ್ರಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.