ಕಂಪ್ಲಿ: ಜೆಸಿಐ ಭಾರತ ಸಹಯೋಗದಲ್ಲಿ ಇಲ್ಲಿನ ಜೆಸಿಐ ಕಂಪ್ಲಿ ಸೋನಾದಿಂದ ವಿವಿಧ ಶಾಲೆಗಳಲ್ಲಿ ರಾಷ್ಟ್ರೀಯ ಪ್ರತಿಭಾ ಅನ್ವೇಷಣಾ ಪರೀಕ್ಷೆ (ಎನ್‌ಎಲ್‌ಟಿಎಸ್) ನಡೆಯಿತು.
ಕಂಪ್ಲಿ ಸೋನಾ ಅಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ ಮಾತನಾಡಿ, ಮಕ್ಕಳಲ್ಲಿ ಪ್ರಚಲಿತ ವಿದ್ಯಮಾನಗಳ ಅರಿವು ಮೂಡಿಸುವ ಜತೆಗೆ ವಿವಿಧ ಶಾಲೆಗಳ ಪ್ರವೇಶ ಪರೀಕ್ಷೆ ಎದುರಿಸುವ ಕೌಶಲ ಪರಿಚಯಿಸಿ ಜಾಗೃತಿಗೊಳಿಸಲು ರಾಷ್ಟ್ರೀಯ ಪ್ರತಿಭಾ ಅನ್ವೇಷಣಾ ಪರೀಕ್ಷೆ ಹಮ್ಮಿಕೊಂಡಿದೆ. ಪ್ರಮುಖ ಶಾಲಾ, ಕಾಲೇಜಿನ 1250 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದವರಿಗೆ 40 ಸಾವಿರ ರೂ., ದ್ವಿತೀಯ 20 ಸಾವಿರ ರೂ. ತೃತೀಯ 10 ಸಾವಿರ ರೂ. ಬಹುಮಾನವನ್ನು ಜೆಸಿಐ ಇಂಡಿಯಾ ನೀಡಲಿದೆ. ರಾಜ್ಯಮಟ್ಟದ ಪ್ರಥಮ ಸ್ಥಾನಕ್ಕೆ 7500 ರೂ., ದ್ವಿತೀಯ 5000 ರೂ. ಹಾಗೂ ತೃತೀಯ ಸ್ಥಾನಕ್ಕೆ 3 ಸಾವಿರ ರೂ. ಬಹುಮಾನ ನೀಡಲಾಗುವುದು. ಪರೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿ ವಿದ್ಯಾರ್ಥಿಗೂ ಪ್ರಮಾಣ ಪತ್ರ ನೀಡಲಿದೆ ಎಂದು ತಿಳಿಸಿದರು.
ಜೆಸಿಐ ಕಂಪ್ಲಿ ಸೋನಾದ ಮಹಿಳಾ ಅಧ್ಯಕ್ಷೆ ಅಮೃತ್ ಸಂತೋಷ್, ಪದಾಧಿಕಾರಿಗಳಾದ ವಾಸಿಂ, ಇಂದ್ರಜಿತ್ ಸಿಂಗ್, ಬಡಿಗೇರ ಜಿಲಾನ್‌ಸಾಬ್, ಬಿ.ಎಚ್.ಎಂ.ಅಮರನಾಥಶಾಸ್ತ್ರಿ, ಡಾ.ಭರತ್ ಪದ್ಮಶಾಲಿ, ಸುಹಾಸ್, ಕೇದಾರನಾಥ್, ಬಿ.ರಸೂಲ್ ಇಮ್ತಿಯಾಜ್ ಇತರರಿದ್ದರು.