ಕಂಪ್ಲಿ: ಕರೊನಾ ಹರಡುವಿಕೆ ನಿಯಂತ್ರಿಸಲು ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಾ ಪಡೆ ಜತೆಗೆ ಸಮಿತಿ ರಚಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ್ ಬಡಿಗೇರ ಹೇಳಿದರು.
ಪಟ್ಟಣದ ಮಾರುತಿ ನಗರದ ಸಮುದಾಯ ಭವನದಲ್ಲಿ ಸೋಮವಾರ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದಿಂದ ಪ್ರಸಾರಗೊಂಡ, ಆನ್‌ಲೈನ್ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರೊನಾ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ 23 ವಾರ್ಡ್‌ಗಳಲ್ಲಿ 32 ಬೂತ್ ಸೇರಿ ಒಟ್ಟು 55 ಕಾರ್ಯಪಡೆ ರಚಿಸಲಾಗಿದೆ. ಇದರಲ್ಲಿ 252 ಸದಸ್ಯರಿದ್ದು, ರೋಗಿಗಳನ್ನು ಗುರುತಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೆ ಸೋಂಕಿತರ ಜಾಡು ಪತ್ತೆ ಹಚ್ಚುವ ತಂಡದೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತದೆ. ಮನೆ ಸಮೀಕ್ಷೆ ಮೂಲಕ ದುರ್ಬಲರ ಪಟ್ಟಿ ಸಿದ್ಧಪಡಿಸಿ ಆರೋಗ್ಯ ತಪಾಸಣೆಗೆ ಜಾಗೃತಿ ವಹಿಸುತ್ತದೆ ಎಂದು ತಿಳಿಸಿದರು.
ಪುರಸಭೆ ಕಂದಾಯ ನಿರೀಕ್ಷಕ ಕೆ.ವೆಂಕೋಬಾ, ಜೆಇ ಗೋಪಾಲ, ಕಂದಾಯ ಅಧಿಕಾರಿ ನಾಗಭೂಷಣ, ಎಂ.ವಸಂತಮ್ಮ, ಬಿ.ಮಲ್ಲಿಕಾರ್ಜುನ, ಸುಧಾಕರ, ಎಸ್.ಚಿದಾನಂದ, ಎ.ಕೆ.ರಾಧಿಕಾ, ಪ್ರಕಾಶಬಾಬು ಇತರರಿದ್ದರು.