ಕಂಪ್ಲಿ: ವಿದ್ಯಾರ್ಥಿಗಳು ಪಾಲಕರ ಆಶಯ ಅರಿತು ಅದಕ್ಕೆ ಪೂರಕವಾಗಿ ನಿರಂತರ ಪ್ರಯತ್ನಿಸುವ ಮೂಲಕ ಗುರಿ ಸಾಧಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸತತ ಅಭ್ಯಾಸ ಕೈಗೊಳ್ಳಬೇಕು ಎಂದರು. ಪ್ರಾಚಾರ್ಯ ಮೊಹಮ್ಮದ್ ಶಫಿ ಮಾತನಾಡಿ, ಕಾಲೇಜು ಹಂತದ ವಿದ್ಯಾರ್ಥಿಗಳು ಕ್ರೀಡೆಯನ್ನು ಉಪೇಕ್ಷಿಸಬಾರದು. ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಬೇಕು ಎಂದರು.
ತಹಸೀಲ್ದಾರ್ ಎಸ್.ಶಿವರಾಜ ಕ್ರೀಡಾಜ್ಯೋತಿ ಬೆಳಗಿಸಿದರು. ಪುರಸಭೆ ಸದಸ್ಯೆ ಹೇಮಾವತಿ ಪೂರ್ಣಚಂದ್ರ, ಪ್ರಮುಖರಾದ ಕನಕಪ್ಪ ಸುಣಗಾರ, ಮಂಜೇಶ್, ಸುನೀಲ್ ಶ್ರೇಷ್ಠಿ, ಪ್ರಾಚಾರ್ಯರಾದ ತಾರಾನಂದ್ಯಾಲ್, ಚಂದ್ರಶೇಖರ, ಬಸವರಾಜ, ಕಾಳಿ ಗಗನ, ಮಹಾಬಲೇಶ್ವರಪ್ಪ, ಶ್ರೀನಿವಾಸ, ಪ್ರಮುಖರಾದ ಬಸವರಾಜ ಪಾಟೀಲ್, ವೀರೇಶ್, ಅಶೋಕ ರಡ್ಡೇರ್, ಬಿ.ಜಾಫರ್, ಎಚ್.ಕುಮಾರಸ್ವಾಮಿ ಇತರರಿದ್ದರು.