ಕಂಪ್ಲಿಯಲ್ಲಿ ಉಪತಹಸೀಲ್ದಾರ್ ಬಿ.ರವೀಂದ್ರಕುಮಾರ್‌ಗೆ ಬಿಜೆಪಿ ರೈತ ಮೋರ್ಚಾ ಮನವಿ ಸಲ್ಲಿಸಿತು. ಮಂಡಲದ ಅಧ್ಯಕ್ಷ ಕೆ.ಹೂವಣ್ಣ, ಪ್ರಮುಖರಾದ ಜಿ.ಶಶಿಧರಗೌಡ, ಕುಮಾರಸ್ವಾಮಿ, ಪ್ರಿ.ಬ್ರಹ್ಮಯ್ಯ, ಜಿ.ಸುಧಾಕರ, ಬಿ.ಸಿದ್ದಪ್ಪ ಇತರರಿದ್ದರು. 
ಜಿಲ್ಲೆ

ನಿರಂತರ ಏಳು ತಾಸು ವಿದ್ಯುತ್ ಪೂರೈಸಿ

ನರೇಶ್ ಕುಮಾರ್

ಕಂಪ್ಲಿ: ರೈತರ ಪಂಪ್‌ಸೆಟ್‌ಗಳಿಗೆ ಅನಿಯಮಿತ ಲೋಡ್‌ಶೆಡ್ಡಿಂಗ್ ರದ್ದುಪಡಿಸಿ, ಹಗಲು ಹೊತ್ತಿನಲ್ಲಿ ನಿರಂತರ ಏಳು ತಾಸು ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಉಪತಹಸೀಲ್ದಾರ್ ಬಿ.ರವೀಂದ್ರಕುಮಾರ್‌ಗೆ ಶುಕ್ರವಾರ ಕಂಪ್ಲಿ ಬಿಜೆಪಿ ಮಂಡಲದ ರೈತ ಮೋರ್ಚಾದಿಂದ ಮನವಿ ಸಲ್ಲಿಸಲಾಯಿತು.

ಮೋರ್ಚಾ ಅಧ್ಯಕ್ಷ ಕೆ.ಹೂವಣ್ಣ ಮಾತನಾಡಿ, ಮಳೆ ಅಭಾವದಿಂದ ಬರ ಎದುರಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿನ ರಾಜ್ಯದ ರೈತ ಪರ ಯೋಜನೆಗಳನ್ನು ಕಾಂಗ್ರೆಸ್ ಆಡಳಿತ ರದ್ದುಪಡಿಸಿದೆ. ಇದರಿಂದ ರೈತರು ಅಕ್ಷರಶಃ ದುಃಸ್ಥಿತಿಯಲ್ಲಿರುವಂತಾಗಿದೆ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸುಮಾರು 42 ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದ್ದು ಆತಂಕಕಾರಿಯಾಗಿದೆ. ಬಿಜೆಪಿ ಅವಧಿಯಲ್ಲಿನ ರೈತ ಪರ ಯೋಜನೆಗಳನ್ನು ಜಾರಿಗೊಳಿಸಬೇಕು. ರೈತರ ಬೆಳೆ ಉಳಿಸಲು ನಿರಂತರ ಏಳು ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಅಳ್ಳಳ್ಳಿ ವೀರೇಶ್, ಪದಾಧಿಕಾರಿಗಳಾದ ಜಿ.ಶಶಿಧರಗೌಡ, ಕುಮಾರಸ್ವಾಮಿ, ಪ್ರಮುಖರಾದ ಪಿ.ಬ್ರಹ್ಮಯ್ಯ, ಜಿ.ಸುಧಾಕರ, ಎನ್.ಪುರುಷೋತ್ತಮ, ಬಿ.ಸಿದ್ದಪ್ಪ, ಜಿ.ಕೆ.ತಿಪ್ಪೇಶ್, ಒ.ಪಿ.ದಾದಾ ಖಲಂದರ್, ಎಸ್.ಭಾಸ್ಕರರೆಡ್ಡಿ, ಬಿ.ರಮೇಶ್, ಹೊನ್ನೂರಸಾಬ್, ಎನ್.ರಾಮಾಂಜನೇಯಲು, ಆಂಜನೇಯ, ಟಿ.ವಿ.ಸುದರ್ಶನರೆಡ್ಡಿ, ಯು.ರುದ್ರಪ್ಪ ಇದ್ದರು.