ಕಂಪ್ಲಿಯ ನಂ.10ಮುದ್ದಾಪುರ ರಸ್ತೆಯ ಗುಂಡಿಗಳಲ್ಲಿ ಚರಂಡಿ, ಮಳೆ ನೀರು ನಿಂತಿರುವುದು. 
ಜಿಲ್ಲೆ

ನಿರಂತರ ಮಳೆಗೆ ಹಾಳಾದ ರಸ್ತೆ

ನರೇಶ್ ಕುಮಾರ್

ಕಂಪ್ಲಿ: ನಿರಂತರ ಮಳೆಯಿಂದಾಗಿ ಪಟ್ಟಣದ ನಂ.10ಮುದ್ದಾಪುರ ರಸ್ತೆ ಹಾಳಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.

ರಸ್ತೆಯಲ್ಲಿ ಗುಂಡಿಗಳು ಬಿದ್ದು ಚರಂಡಿ, ಮಳೆ ನೀರು ನಿಂತಿದ್ದು, ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಬೀಳುತ್ತಿದ್ದಾರೆ. ರಸ್ತೆಯುದ್ದಕ್ಕೂ ಬೀದಿ ದೀಪಗಳಿಲ್ಲದೆ ಕತ್ತಲು ಆವರಿಸಿ ಜನ ಸಂಚಾರಕ್ಕೆ ಅಡಚಣೆಯಾಗಿದೆ. ಪುರಸಭೆ ಸಿಬ್ಬಂದಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.

ರಸಭೆ ಅಧಿಕಾರಿಗಳು ಚರಂಡಿ ಸ್ವಚ್ಛಗೊಳಿಸಿ, ರಸ್ತೆ ಗುಂಡಿಗಳನ್ನು ಮುಚ್ಚಿ ಸರಿಪಡಿಸಬೇಕು. ಬೀದಿ ದೀಪ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರಾದ ಡಿ.ಶ್ರೀನಿವಾಸ, ಚಂದ್ರಶೇಖರ್, ಬಿ.ಗೋಪಾಲಪ್ಪ, ಮೌಲಾ, ನೂರ್, ಯೂನೀಸ್, ಖಾಜಾ ಇತರರು ಆಗ್ರಹಿಸಿದ್ದಾರೆ.


ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಪ್ರತಿಕ್ರಿಯಿಸಿ, ರಸ್ತೆ ಮೇಲಿನ ಗುಂಡಿಗಳನ್ನು ಮುಚ್ಚಿ ಸರಿಪಡಿಸಲಾಗುವುದು. ಬೀದಿ ದೀಪಗಳನ್ನು ಹಾಕಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.