ಕಂಪ್ಲಿ: ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಎಸ್ಸಿ ಅನುದಾನದಲ್ಲಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಶಾಸಕ ಜೆ.ಎನ್.ಗಣೇಶಗೆ ತಾಲೂಕು ಭೋವಿ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ವಿ.ಸಾಮಿಲ್ ಶೇಖಪ್ಪ ಮಾತನಾಡಿ, ತಾಲೂಕಿನಲ್ಲಿ ಸಮುದಾಯದ ಜನಸಂಖ್ಯೆ 20 ಸಾವಿರಕ್ಕೂ ಹೆಚ್ಚಿದೆ. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸಮುದಾಯ ಭವನ ಕಾಮಗಾರಿ ಕೈಗೊಂಡಿದ್ದು, ನಿರ್ಮಾಣ ಹಂತದಲ್ಲಿದ್ದು ಹಣದ ಕೊರತೆಯಿಂದಾಗಿ ಸ್ಥಗಿತಗೊಂಡಿದೆ. ಸ್ಟೇರ್‌ಕೇಸ್, ಶೌಚಗೃಹ, ಮುಖ್ಯದ್ವಾರ, ವಿದ್ಯುತ್, ಸುಣ್ಣ ಬಣ್ಣ ಸೇರಿ ಇತರ ಕಾಮಗಾರಿಗೆ ಹತ್ತು ಲಕ್ಷ ರೂ. ಅವಶ್ಯಕವಿದೆ. ಎಸ್ಸಿ ಅನುದಾನದಲ್ಲಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ವಿ.ಗೋವಿಂದರಾಜುಲು, ವಿ.ಸತ್ಯಪ್ಪ, ಫಕ್ಕೀರಪ್ಪ, ಶ್ರೀನಿವಾಸ್, ಪ್ರಮುಖರಾದ ಎಂ.ಸುಧೀರ್, ಜಿ.ಸುಧಾಕರ, ಬಿ.ಜಾಫರ್, ಕೆ.ಮನೋಹರ ಇತರರಿದ್ದರು.