ಎಮ್ಮಿಗನೂರಿನ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಕಾರಂಜಿಯಲ್ಲಿ ಛದ್ಮವೇಷ ತೊಟ್ಟು ಗಮನ ಸೆಳೆದ ಮಕ್ಕಳು. ಪ್ರಮುಖರಾದ ಎಂ.ರೇವಣ್ಣ, ಸ್ವಯಂಪ್ರಭಾ, ಶಾರದಾ ಜಡೆಮೂರ್ತಿ, ಮಂಜುನಾಥ, ಬಿ.ಎಸ್.ಸದ್ಯೋಜಾತಪ್ಪ ಇತರರಿದ್ದರು. 
ಜಿಲ್ಲೆ

ಮಕ್ಕಳ ಮನಸು ಅರಿತು ಶಿಕ್ಷಣ ನೀಡಿ

ಕಂಪ್ಲಿ: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಇಸಿಒ ಎಂ.ರೇವಣ್ಣ ಹೇಳಿದರು.

ಎಮ್ಮಿಗನೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ಮಗುವಿನಲ್ಲಿ ಪ್ರತಿಭೆಯಿದ್ದು, ಶಿಕ್ಷಕರು ಗುರುತಿಸಿ ಜಾಗೃತಗೊಳಿಸುವ ಮೂಲಕ ಪ್ರತಿಭಾವಂತನನ್ನಾಗಿಸಬೇಕಿದೆ. ಮಕ್ಕಳ ಮನಸ್ಸನ್ನರಿತು ಶಿಕ್ಷಣ ನೀಡುವಲ್ಲಿ ಮುಂದಾಗಬೇಕು ಎಂದರು.

ಸಿಆರ್‌ಪಿ ಸ್ವಯಂಪ್ರಭಾ ಮಾತನಾಡಿ, ಮಕ್ಕಳು ತಮ್ಮಲ್ಲಿನ ಕಲೆ ಪ್ರದರ್ಶಿಸುವಲ್ಲಿ ಮುಂದಾಗಬೇಕು. ಜಿಲ್ಲಾ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವಂತೆ ಪ್ರದರ್ಶನ ತೋರುವಂತೆ ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಶಾರದಾ ಜಡೆಮೂರ್ತಿ ಉದ್ಘಾಟಿಸಿದರು. ಜಿಪಿಟಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ಮುಖ್ಯಶಿಕ್ಷಕ ಬಿ.ಎಸ್.ಸದ್ಯೋಜಾತಪ್ಪ, ಎಸ್ಡಿಎಂಸಿ ಅಧ್ಯಕ್ಷರಾದ ರಾಜ, ಎಚ್.ಚಂದ್ರಶೇಖರ, ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಮಲ್ಲೇಶ, ತಾಲೂಕು ಅಧ್ಯಕ್ಷ ಎಸ್.ರಾಮಪ್ಪ, ಶಿಕ್ಷಕರಾದ ಆದೇಶ ಜವಳಿ, ಕೆ.ವೈ.ಪಾಂಡುರಂಗ, ಸರ್ವೇಶ್ ಇತರರಿದ್ದರು.