ಕಂಪ್ಲಿ ತಾಲೂಕಿನ ಚಿಕ್ಕಜಾಯಿಗನೂರು ಗ್ರಾಮದ ರೈತ ನೆಹರುಗೌಡ ಮೇಲೆ ಕೋತಿ ಕುಳಿತಿರುವುದು. 
ಜಿಲ್ಲೆ

ನಾಲ್ವರನ್ನು ಕಚ್ಚಿ ಗಾಯಗೊಳಿಸಿದ ಕೋತಿ

ಶ್ರೀನಾಥ

ಕಂಪ್ಲಿ: ಚಿಕ್ಕಜಾಯಿಗನೂರು ಗ್ರಾಮದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕರಿಕೋತಿ ಹಾವಳಿ ಹೆಚ್ಚಿದ್ದು, ಗುರುವಾರ ನಾಲ್ವರನ್ನು ಕಚ್ಚಿ ಗಾಯಗೊಳಿಸಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಕೋತಿ ಜನರ ಪಕ್ಕದಲ್ಲಿ ಅಥವಾ ಮೈಮೇಲೆ ಕುಳಿತುಕೊಳ್ಳುತ್ತದೆ. ಜನ ಭಯದಿಂದ ಓಡಿದರೆ, ಚೀರಿದರೆ ಕೂಡಲೇ ಕಚ್ಚಿ ಗಾಯಗೊಳಿಸುತ್ತದೆ.

ಗುರುವಾರ ಒಂದೇ ದಿನ ಗ್ರಾಮದ ವಿ.ಗೋವಿಂದರಾಜ, ಜಿ.ಶಂಕರಗೌಡ, ನೆಹರು ಗೌಡ ಸೇರಿದಂತೆ ನಾಲ್ವರ ಕೈಗೆ ಕಚ್ಚಿ ಗಾಯಗೊಳಿಸಿದೆ. ಕೋತಿಯನ್ನು ಸೆರೆ ಹಿಡಿದು ದೂರ ಸಾಗಿಸಬೇಕು ಎಂದು ಗ್ರಾಮದ ಜೆ.ಕಾಟಂ ರಾಜು, ಎಂ.ಬಷೀರ್, ಶರಣಗೌಡ, ಬಿ.ಮಾರೆಪ್ಪ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ತಾಪಂ ಇಒ ಆರ್.ಕೆ.ಶ್ರೀಕುಮಾರ್, ಗ್ರಾಮದಲ್ಲಿ ಬೋನು ಇಟ್ಟು ಕರಿಕೋತಿಯನ್ನು ಸೆರೆಹಿಡಿಯುವಂತೆ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.