ಕಂಪ್ಲಿಯ 4ನೇ ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶಾಸಕ ಜೆ.ಎನ್.ಗಣೇಶ್ ಸ್ಥಳೀಯರೊಂದಿಗೆ ಚರ್ಚಿಸಿದರು. ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸದಸ್ಯ ಸಿ.ಆರ್.ಹನುಮಂತ, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಸಹಿಪ್ರಾ ಶಾಲೆ ಮುಖ್ಯಶಿಕ್ಷಕಿ ರಾಜೇಶ್ವರಿ ಇತರರಿದ್ದರು. 
ಜಿಲ್ಲೆ

ಸೇತುವೆ ನಿರ್ಮಾಣಕ್ಕಾಗಿ ಸುರ್ಜೇವಾಲಾಗೆ ಮನವಿ

ಶ್ರೀನಾಥ

ಕಂಪ್ಲಿ: ಬಳ್ಳಾರಿ-ಕೊಪ್ಪಳ ಜಿಲ್ಲೆಗಳಿಗೆ ಅಗತ್ಯವಾಗಿರುವ ಕಂಪ್ಲಿ ಬಳಿಯ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರನ್ನು ಒತ್ತಾಯಿಸಿದ್ದೇನೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಪಟ್ಟಣದ 3, 5, 9 ಮತ್ತು 12ನೇ ವಾರ್ಡ್‌ಗಳಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ತಲಾ 50 ಲಕ್ಷ ರೂ. ವೆಚ್ಚದ ಸಿಸಿರಸ್ತೆ, ಚರಂಡಿ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನದಿ ಸೇತುವೆ ನಿರ್ಮಾಣಕ್ಕೆ ಈ ಹಿಂದೆ ಹಣ ಬಿಡುಗಡೆಗೊಂಡಿದೆ ಎಂದು ವಿಪಕ್ಷಗಳು ಸುಳ್ಳು ಹೇಳಿವೆ ಹೊರತು, ಸೇತುವೆ ನಿರ್ಮಿಸಲಿಲ್ಲ ಎಂದರು.

35 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಗೊಳಿಸಲು 5, 9ನೇ ವಾರ್ಡ್‌ಗಳಲ್ಲಿ ಆರಂಭಿಸಿ ಹಂತ-ಹಂತವಾಗಿ ಪೂರ್ಣಗೊಳಿಸಲಾಗುವುದು. 7.50 ಕೋಟಿ ರೂ.ಗಳಲ್ಲಿ ಬಿಎಸ್‌ವಿ ಶಾಲೆ ಇರುವ ಸ್ಥಳದಲ್ಲಿ ಪುರಸಭೆ ಕಟ್ಟಡ ನಿರ್ಮಿಸಲಾಗುವುದು.

7 ಕೋಟಿ ರೂ. ವೆಚ್ಚದಲ್ಲಿ ಸೋಮಪ್ಪ ಕೆರೆ ಅಭಿವೃದ್ಧಿ, 2 ಕೋಟಿ ರೂ. ವೆಚ್ಚದಲ್ಲಿ ಹಳೆಯ ಬಸ್‌ನಿಲ್ದಾಣ, ಅಗ್ನಿಶಾಮಕ ದಳ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಪಟ್ಟಣದ 4 ನೇ ವಾರ್ಡ್‌ನ ಸರ್ಕಾರಿ ಶಾಲೆ, ಎದುರಿನ ಮನೆಗಳಲ್ಲಿ ಮಳೆ ನೀರು ಹೋಗುವುದನ್ನು ತಡೆಯಲು, ಶೌಚಗೃಹ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದ್ದು, ಶಾಲಾವರಣ ಗೋಡೆ ಎತ್ತರಿಸಿ ತಂತಿಬೇಲಿ ಅಳವಡಿಸುವಂತೆ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಪ್ರಭಾರ ಮುಖ್ಯಶಿಕ್ಷಕ ರಾಜೇಶ್ವರಿ ಶಾಸಕರನ್ನು ಕೋರಿದರು. 12ನೇ ವಾರ್ಡ್ ನಿವಾಸಿಗಳಿಗೆ ಪಟ್ಟಾ ವಿತರಿಸುವಂತೆ ಶೈಲಜಾ, ಮಲ್ಲಿಕಾ, ಯಲ್ಲಮ್ಮ, ಸುವರ್ಣ, ಶಾರದಾ, ರಾಜಮ್ಮ ಇನ್ನಿತರರು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಸತ್ಯಪ್ಪ, ಡೆಕೋರೇಟರ್ ನಾಗರಾಜ, ಜಿ.ಸುಧಾಕರ, ಆಟೋ ರಾಘವೇಂದ್ರ, ಶ್ರೀನಿವಾಸ್, ಯಾಳ್ಪಿ ಅಬ್ದುಲ್ ಮುನಾಫ್, ಸಿ.ಆರ್.ಹನುಮಂತ, ಹಬೀಬ್ ರೆಹಮಾನ್, ಬಿ.ಸಿದ್ದಪ್ಪ,ಕೆ.ಮಸ್ತಾನ್, ನೇಣ್ಕಿ ಗಿರಿ, ಡಿಶ್ ಪ್ರಸಾದ್, ಎಚ್.ಕುಮಾರಸ್ವಾಮಿ, ಕೆ.ಮೆಹಬೂಬ್ ಇತರರಿದ್ದರು.