ಎಮ್ಮಿಗನೂರು ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಪಠ್ಯೇತರ ಪುಸ್ತಕ ಓದುವ ಅಭಿಯಾನದ ಮಿಂಚುಪಟ್ಟಿ ಪ್ರದರ್ಶಿಸಲಾಯಿತು. ಪ್ರಮುಖರಾದ ಶ್ರುತಿ ಗಡದ, .ಎಸ್. ಸದ್ಯೋಜಾತಪ್ಪ, ವಾಣಿ, ಮೊಹಮ್ಮದ್ ತಸ್ಮ್ ಇತರರಿದ್ದರು. 
ಜಿಲ್ಲೆ

ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ

ನರೇಶ್ ಕುಮಾರ್

ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಎಸ್‌ಡಬ್ಲುೃ ರೂಮ್ ಟು ರೀಡ್ ಯೋಜನೆಯಡಿ ಓದು ಕಾರ್ಯಕ್ರಮ ನಡೆಯಿತು.

ತಾಲೂಕು ಸಂಯೋಜನಾಧಿಕಾರಿ ಶ್ರುತಿ ಗಡದ್ ಮಾತನಾಡಿ, ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಓದುವುದರಲ್ಲಿಯೂ ಆಸಕ್ತಿ ತೋರಬೇಕಿದೆ. ಕಥೆ, ಕವನ, ಚಿತ್ರಪಠ, ಮಕ್ಕಳ ಸಾಹಿತ್ಯ ಕೃತಿಗಳನ್ನು ಬಾಲ್ಯದಲ್ಲಿಯೇ ಓದುವ ಹವ್ಯಾಸ ಅಳವಡಿಸಿಕೊಂಡಲ್ಲಿ ಸೃಜನಶೀಲತೆ ಬೆಳೆಸಿಕೊಳ್ಳಲು ಸಾಧ್ಯ ಎಂದರು.

ಮುಖ್ಯಶಿಕ್ಷಕ ಬಿ.ಎಸ್. ಸದ್ಯೋಜಾತಪ್ಪ ಮಾತನಾಡಿದರು. ಶಿಕ್ಷಕರಾದ ವಾಣಿ, ಮೊಹಮ್ಮದ್ ತಸ್ಮ್, ಶ್ರುತಿ, ಶಿವನೇಗೌಡ ರಾಮಪ್ಪ, ಹೂಗಾರ್ ಲೋಕೇಶ್, ಮಂಜುನಾಥ್, ಲಲಿತಾ, ಜಯಮ್ಮ, ಪ್ರಮೀಳಾ, ಮೀನಾಕ್ಷಿ, ಲಕ್ಷ್ಮೀ ಇತರರಿದ್ದರು.