ಸಂಘದ ತಾಲೂಕು ಅಧ್ಯಕ್ಷೆ ಜೆ.ಮಹಾಲಕ್ಷ್ಮೀ, ಪದಾಧಿಕಾರಿಗಳಾದ ಎಚ್.ಚಂದ್ರಲೇಖಾ, ಯು. ಪದ್ಮಾವತಿ, ಬಿ.ಲಕ್ಷ್ಮೀ, ವಿ.ಟಿ.ಅನಸೂಯಾ, ಅನಿತಾ, ಸಾವಿತ್ರಮ್ಮ, ವೆಂಕಟಪದ್ಮಾ ಇತರರಿದ್ದರು. 
ಜಿಲ್ಲೆ

ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ

ಕಂಪ್ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಜೆ.ಮಹಾಲಕ್ಷ್ಮೀ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15ಸಾವಿರ ರೂ. ಗೌರವಧನ, ನಗರದ ಕಾರ್ಯಕರ್ತೆಯರಿಗೆ 2ಸಾವಿರ ರೂ. ಹೆಚ್ಚಿನ ಮಾಸಿಕ ಗೌರವಧನ ನೀಡಬೇಕು. ಒತ್ತಾಯಪೂರ್ವಕ ಮೊಬೈಲ್ ಕೆಲಸ ಕೈಬಿಡಬೇಕು. ಮೊಬೈಲ್ ಕೆಲಸ ಬಾರದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮೊಬೈಲ್ ಡೇಟಾ ಒದಗಿಸಬೇಕು. 60ವರ್ಷಕ್ಕೆ ಸೇವಾ ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ 3ಲಕ್ಷ ರೂ. ಪಿಂಚಣಿ ನೀಡಬೇಕು. ಕರ್ತವ್ಯನಿರತ ಅನಾಹುತಗಳಿಗೆ ಇಲಾಖೆ ಹೊಣೆ ಹೋರಬೇಕು. ಪ್ರತಿ ವರ್ಷ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ಮಾಡಿಸಿ ಉಚಿತ ಚಿಕಿತ್ಸೆ ಕೊಡಿಸಬೇಕು. ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ ವೇತನ, ಗ್ರಾಜ್ಯುಟಿ, ಪಿಎಫ್, ಇಎಸ್‌ಐ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಎಚ್.ಚಂದ್ರಲೇಖಾ, ಯು.ಪದ್ಮಾವತಿ, ಬಿ.ಲಕ್ಷ್ಮೀ, ವಿ.ಟಿ.ಅನಸೂಯಾ, ಅನಿತಾ, ಸಾವಿತ್ರಮ್ಮ, ವೆಂಕಟಪದ್ಮಾ, ಸೂರಯ್ಯ, ಕಾಸಿಂಬೀ ಇತರರಿದ್ದರು.