ಜಿಲ್ಲೆ

ನಾನು ಆನಂದಸಿಂಗ್ ಒಂದಾಗಿದ್ದೇವೆ, ಶಾಸಕ ಜೆ.ಎನ್.ಗಣೇಶ್ ಹೇಳಿಕೆ

Ballari

ಕಂಪ್ಲಿ: ಶಾಸಕ ಆನಂದಸಿಂಗ್ ಮತ್ತು ನಾನು ಒಂದಾಗಿದ್ದೇವೆ. ಈಗಲ್‌ಟನ್ ರೆಸಾರ್ಟ್ ಪ್ರಕರಣ ಸುಖಾಂತ್ಯ ಕಾಣಲಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ 50 ಲಕ್ಷ ರೂ.ವೆಚ್ಚದ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಮಾಜಿ ಶಾಸಕ ಸುರೇಶ್‌ಬಾಬು ಸೋಲಿನ ಹತಾಶೆಯಿಂದ ಇನ್ನೂ ಹೊರ ಬಂದಿಲ್ಲ. 10 ವರ್ಷಗಳ ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಕೈಗೊಳ್ಳದೆ ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನು ಭೂಮಿ ಪೂಜೆ ಮಾಡಿದ ಕಾಮಗಾರಿಗಳು ಸದ್ಯ ಪ್ರಗತಿಯಲ್ಲಿವೆ. ಕೆಲವು ಪೂರ್ಣಗೊಂಡಿವೆ. ಅನುದಾನ ಮಂಜೂರಾಗಿದ್ದರೆ ಮಾತ್ರ ಭೂಮಿಪೂಜೆ ಮಾಡುತ್ತೇನೆ ಹೊರತು ಅವರಂತೆ ಕಣ್ವಿ ತಿಮ್ಮಲಾಪುರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹತ್ತು ಬಾರಿ ಭೂಮಿ ಪೂಜೆ ನೆರವೇರಿಸಿದರೂ ಇದುವರೆಗೂ ಭವನ ನಿರ್ಮಿಸಲಿಲ್ಲ ಎಂದು ಛೇಡಿಸಿದರು. ಜಿಪಂ ಅಧ್ಯಕ್ಷೆ ಜಿ.ಭಾರತಿ ತಿಮ್ಮಾರೆಡ್ಡಿ, ಜಿಪಂ ಸದಸ್ಯೆ ಬನಶಂಕರಿ, ತಾಪಂ ಸದಸ್ಯ ಓಬಳೇಶ, ಎಪಿಎಂಸಿ ಅಧ್ಯಕ್ಷ ಸೋಮಶೇಖರ್, ಸದಸ್ಯರಾದ ಎಸ್.ಎಂ.ನಾಗರಾಜ, ಕಲ್ಯಾಣಿ ದೊಡ್ಡ ಬಸವರಾಜ್ ಇತರಿದ್ದರು.