ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಕಾರ್ಯಕ್ರಮ ಶುಕ್ರವಾರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಮಲ್ಲಿಕಾರ್ಜುನ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಪಡೆದು ಬಂದ ಭಕ್ತರು ಮಲ್ಲಯ್ಯ ದೇವಸ್ಥಾನಕ್ಕೆ ಬಂದು ಕಂಬಿ ಮಲ್ಲಯ್ಯನಿಗೆ ಬೆಲ್ಲದ ನೈವೇದ್ಯ ಹಂಚಿದರು. ಬಳಿಕ ಕಂಬಿ ಐದೇಶಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ಭಕ್ತಿ ಮೆರೆದರು. ಶ್ರೀಶೈಲ ಮಲ್ಲಿಕಾರ್ಜುನ ಪಾದಯಾರ್ತಿಗಳಿಗೂ ಗ್ರಾಮಸ್ಥರು ಬೆಲ್ಲ ಅರ್ಪಿಸುವುದು ವಿಶೇಷವಾಗಿತ್ತು. ಸಂಜೆ ಕಲಾ ಪ್ರದರ್ಶನ ಜರುಗಿತು.
ಅರ್ಚಕ ಶ್ರೀಶೈಲ ಮಠಪತಿ, ರಾಜುಗೌಡ ಪಾಟೀಲ, ಶಿವಗೌಡ ನೇಮಗೌಡ, ಮಲ್ಲಿಕಾರ್ಜುನ ಪರಾಂಡೆ, ರಾವಸಾಹೇಬ ಹಳಕಿ, ಪರಶುರಾಮ ಚವ್ಹಾಣ, ಗಣಪತಿ ತುಂಗಳಿ, ಶ್ರೀದೇವಿ ಕುಂಬಾರ, ಕಸ್ತೂರಿ ಮಾಳಿ, ಛಾಯಾ ತಳವಾರ, ತಂಗೆವ್ವ ರಡ್ಡೇರಹಟ್ಟಿ, ಜಯಪಾಲ ದುರ್ಗಣ್ಣವರ ಇತರರಿದ್ದರು.