ಜಿಲ್ಲೆ

ಕಂಬಳ ವಿಜ್ರಂಭಣೆಯಿಂದ ನಡೆಯಲು ಪ್ರಾರ್ಥನೆ - ಕರೆ ಮುಹೂರ್ತ ನೆರವೇರಿಸಿ ಈಶ್ವರ್ ಭಟ್ ಹಾರೈಕೆ

Mangaluru - Nishantha Narayana

ಪುತ್ತೂರು: ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ, ಅವುಗಳ ಮಾಲೀಕರಿಗೆ, ಸಂತೆ ಅಂಗಡಿಯವರಿಗೆ, ಭಾಗವಹಿಸುವ ಯಾರೊಬ್ಬರಿಗೂ ತೊಂದರೆ ಬರದಂತೆ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸುಕೊಳ್ಳುತ್ತೇವೆ. ಕಂಬಳ ವಿಜ್ರಂಭಣೆಯಿಂದ ನಡೆದುಕೊಂಡು ಬರಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ದೈವ ದೇವರು ಒದಗಿಸಿಕೊಂಡುವಂತೆ ಮಾಡಬೇಕಾಗಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ೩೨ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡು ಕರೆ ಕಂಬಳದ ಹಿನ್ನೆಲೆಯಲ್ಲಿ ಸೋಮವಾರ ಕರೆ ಮುಹೂರ್ತ ನಡೆಸಿ ಮಾತನಾಡಿದರು.

ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ೩೨ ವರ್ಷದ ಹಿಂದೆ ಪ್ರಾರಂಭವಾದ ಕಂಬಳ ಎಲ್ಲರ ಸಹಕಾರದಿಂದ ನಡೆದುಕೊಂಡು ಬಂದಿದೆ. ಯಾವುದೇ ಅಡೆತಡೆ ಇಲ್ಲದ ರೀತಿಯಲ್ಲಿ ಕಂಬಳವನ್ನು ಮಹಾಲಿಂಗೇಶ್ವರ ದೇವರು ನಡೆಸಿಕೊಂಡು ಬಂದಿದ್ದಾರೆ. ಹೊಸದಾಗಿ ರಾಜ್ಯಮಟ್ಟದ ಕೆಸರು ಗದ್ದೆ ಓಟ ಮಾಡಬೇಕೆಂಬ ಯೋಚನೆ ಇದ್ದು, ಇದರ ಅಂತಿಮ ನಿರ್ಧಾರ ಮಾಡಬೇಕಾಗಿದೆ. ಕಂಬಳದಲ್ಲಿ ಭಾಗವಹಿಸುವ ಕೋಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ಕಾಲಮಿತಿಯಲ್ಲಿ ಕಂಬಳವನ್ನು ಮುಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ. ವಿ., ಪದಾಽಕಾರಿಗಳಾದ ಕೃಷ್ಣಪ್ರಸಾದ್ ಆಳ್ವ, ಉದ್ಯಮಿ ಶಿವರಾಮ ಆಳ್ವ, ರೋಶನ್ ರೈ ಬನ್ನೂರು, ಜಿನ್ನಪ್ಪ ಪೂಜಾರಿ ಮುರ, ಸುರೇಂದ್ರ ರೈ ನೇಸರ, ಗಂಗಾಧರ್ ಶೆಟ್ಟಿ ಕೈಕಾರ, ವಸಂತ್ ರೈ, ವಿಕ್ರಮ್ ಶೆಟ್ಟಿ ಅಂತರ, ಸುದರ್ಶನ್ ನಾಯ್ಕ್, ಉಮೇಶ್ ಪೂಜಾರಿ, ಪ್ರಣಮ್ ಶೆಟ್ಟಿ ಕೈಕಾರ, ರಾಕೇಶ್ ರೈ, ಮಂಜುನಾಥ ಗೌಡ ತೆಂಕಿಲ, ಶರತ್ ಕೇಪುಳು ಉಪಸ್ಥಿತರಿದ್ದರು.