ಕಮಲನಗರದಲ್ಲಿ ಮಂಗಳವಾರ ತಾಲೂಕು ಪಿಡಿಒ ಸಂಘದ ಅಧ್ಯಕ್ಷ ದತ್ತಾತ್ರಿ ಪೂಜಾರಿ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ್ಯ ವಹಿಸಿದೆ ಎಂದು ಖಂಡಿಸಿ ತಾಪಂ ಇಒ ಮಾಣಿಕರಾವ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಪಂ ಸಹಾಯಕ ನಿರ್ದೆಶಕ ಹಣಮಂತರಾವ ಕೌಟಗೆ, ಶಿವಕುಮಾರ ಘಾಟೆ, ಪಿಡಿಒ ಮನೋಹರ.ಎಸ್, ಬಾಬುರಾವ ಸಂಗಮಕರ, ವಿಜಯಕುಮಾರ ಪಾಟೀಲ್, ಪ್ರಶಾಂತ, ಬಾಲಾಜಿ ಬಿರಾದಾರ, ತಾನಾಜಿ ಪಾಟೀಲ್ ಇತರರಿದ್ದರು. 
ಜಿಲ್ಲೆ

ಇಂದಿನಿಂದ ಪಿಡಿಒಗಳ ಅಸಹಕಾರ ಚಳವಳಿ

ರಾಜು ಯಮಕನಮರಡಿ

ಕಮಲನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯವಹಿಸಿರುವುದನ್ನು ಖಂಡಿಸಿ ನ.೮ ರಿಂದ ಕೆಲಸ ನಿರ್ವಹಿಸದೇ ಅಸಹಕಾರ ಚಳವಳಿ ನಡೆಸುವುದಾಗಿ ಎಂದು ತಾಲೂಕು ಘಟಕ ಪಿಡಿಒ ಸಂಘದ ಅಧ್ಯಕ್ಷ ದತ್ತಾತ್ರಿ ಪೂಜಾರಿ ನೇತೃತ್ವದಲ್ಲಿ ಮಂಗಳವಾರ ತಾಪಂ ಇಒ ಮಾಣಿಕರಾವ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಅಧ್ಯಕ್ಷ ದತ್ತಾತ್ರಿ ಪೂಜಾರಿ ಮಾತನಾಡಿ, ಈ ಚಳವಳಿ ಸಂದರ್ಭದಲ್ಲಿ ಇಲಾಖೆಗೆ ಸಂಬಂಧಿಸಿದ ಎಲ್ಲ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸುವುದು, ಮೇಲಧಿಕಾರಿ ಕರೆಯುವ ಸಭೆಗೂ ಗೈರು ಹಾಜರಾಗುತ್ತೇವೆ. ಆದರೆ, ಜನರ ಮೂಲಸೌಲಭ್ಯ ಸೇವೆಗಳನ್ನು ಮಾತ್ರ ನೀಡುತ್ತೇವೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಮಲ್ಲೇಶ ಮಾತನಾಡಿ, ಹಿಂದೆ ನೀಡಿದ ಭರವಸೆ ಈವರೆಗೂ ಬೇಡಿಕೆ ಈಡೇರಿಲ್ಲ. ಹಾಗಾಗಿ ತಾವು ಮೊದಲ ಹಂತದಲ್ಲಿ ಅಸಹಕಾರ ಚಳುವಳಿ ನಡೆಸಲು ನಿರ್ಧರಿಸಿರುವುದಾಗಿದೆ. ಈ ಬಾರಿಯೂ ತಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೇ ರಾಜ್ಯದ್ಯಂತ ಎಲ್ಲ ಜಿಪಂ ಗಳ ಮುಂದೆ ಅನಿರ್ಧಿಷ್ಟವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ತಾಪಂ ಸಹಾಯಕ ನಿರ್ದೆಶಕ ಹಣಮಂತರಾವ ಕೌಟಗೆ, ಶಿವಕುಮಾರ ಘಾಟೆ, ಪಿಡಿಒ ಮನೋಹರ.ಎಸ್, ಬಾಬುರಾವ ಸಂಗಮಕರ, ವಿಜಯಕುಮಾರ ಪಾಟೀಲ್, ಪ್ರಶಾಂತ, ಬಾಲಾಜಿ ಬಿರಾದಾರ, ತಾನಾಜಿ ಪಾಟೀಲ್, ರಾಜಕುಮಾರ ತಂಬಾಕೆ, ಸಂಧ್ಯಾರಾಣಿ, ಬಾಲಾಜಿ ಬಿರಾದಾರ, ಸಂಗಪ್ಪ ಹೂಗಾರ, ರಾಮದಾಸ ಬೆಲೂರೆ, ತೋರಣಾ ವಿಜಯಕುಮಾರ ಪಾಟೀಲ್, ವಿವೇಕಾನಂದ ಹಾಗೂ ಡಿಇಒ ಸಿಬ್ಬಂದಿ ಇದ್ದರು.