ಜಿಲ್ಲೆ

ಭೂಮಿ ತಾಯಿ ಮಡಿಲು ಫಲವತ್ತಾದರೆ ದೇಶ ಸಮೃದ್ಧಿ

ಗೋಪಾಲಕೃಷ್ಣ ಪಾದೂರ್

ಡುಪಿ: ಜನತೆಗೆ ಅನ್ನ ನೀಡುವ ಭೂಮಿ ತಾಯಿ ಮಡಿಲು ಫಲವತ್ತಾದರೆ ದೇಶ ಸಮೃದ್ಧಿಯಾಗುತ್ತದೆ. ಕೆಸರುಗದ್ದೆ ಓಟದಿಂದ ಇಂದಿನ ಜನಾಂಗಕ್ಕೆ ಭೂಮಿತಾಯಿಯ ಮಡಿಲಿನಲ್ಲಿ ದೊರಕುವ ಆನಂದದ ಅನುಭವವಾಗುತ್ತದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಭಾನುವಾರ ಕರಂಬಳ್ಳಿಯಲ್ಲಿ ಬಿಜೆಪಿ ನಗರ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಕಮಲ ಸಂಗಮ (ಕೆಸರ್ಡ್ ಒಂಜಿ ದಿನ ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು. ಕೇರಳದಿಂದ ಸಿಂಗಪೂರ್‌ವರೆಗೆ ಸೈಕಲ್ ಪ್ರವಾಸ ಕೈಗೊಂಡಿರುವ ಹರ್ಷೆಂದ್ರ ಆಚಾರ್ಯ ಮುಂಡ್ಕಿನಜೆಡ್ಡು ಮತ್ತು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿ ಆಯ್ಕೆಯಾದ ಉದಯಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಷ್ಟ್ರೀಯ ಹಿಂದುಳಿದ ವರ್ಗದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುರು ಪ್ರಸಾದ್ ಶೆಟ್ಟಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಮತ್ತು ದಿನೇಶ್ ಅಮೀನ್, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಸಹವಕ್ತಾರ ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.