ಜಿಲ್ಲೆ

ಕಲ್ಯಾಣವೃಷ್ಟಿ ಸ್ತೋತ್ರ ಮಹಾಸಮರ್ಪಣೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ಭಾರತೀ ತೀರ್ಥ ಸ್ವಾಮಿಗಳ 50ನೇ ವರ್ಷದ ಸನ್ಯಾಸ ಸ್ವೀಕಾರ ನಿಮಿತ್ತ ಸುವರ್ಣ ಭಾರತೀ ಅಡಿ ನಗರದ ಯಾಲಕ್ಕಿಶೆಟ್ಟರ್​ ಕಾಲನಿಯ ಶೃಂಗೇರಿ ಮಠದ ವಿದ್ಯಾಭಾರತಿ ಸಭಾಂಗಣದಲ್ಲಿ ಕಲ್ಯಾಣವೃಷ್ಟಿ ಮಹಾಭಿಯಾನ ಸ್ತೋತ್ರ ಸಮರ್ಪಣೆ ಕಾರ್ಯಕ್ರಮ ಬುಧವಾರ ಜರುಗಿತು.
ಸಮಾರಂಭದಲ್ಲಿ ಶೃಂಗೇರಿ ಮಠದ ಪ್ರತಿನಿಧಿಯಾಗಿ ಉಮೇಶ ಹರಿಹರ, ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದ ಜಿಲ್ಲಾಧ್ಯಕ್ಷ ರವಿ ದೇಶಪಾಂಡೆ, ಜಿ. ಆರ್​.ಪಾಟೀಲ್​ ಹಾಗೂ ಧಾರವಾಡ ಶೃಂಗೇರಿ ಶಾಖಾ ಮಠದ ವ್ಯವಸ್ಥಾಪಕ ವಿಠ್ಠಲ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿವಿಧ ಮಹಿಳಾ ಮಂಡಳ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸುಮಾರು ಎರಡೂವರೆ ಸಾವಿರ ಜನರು ಭಾಗವಹಿಸಿದ್ದು, ಉತ್ತರ ಕರ್ನಾಟಕದಲ್ಲೇ ಒಂದು ದಾಖಲೆಯಾದಂತಾಗಿದೆ. ಶ್ರದ್ಧಾ ಭಕ್ತಿಯಿಂದ ಸ್ತೋತ್ರ ಸಮರ್ಪಣೆ ಮಾಡಲಾಯಿತು.