ನರಗುಂದ: ಪಟ್ಟಣದ ಶ್ರೀ ಸಿದ್ಧೇಶ್ವರ ಬೆಟ್ಟದ ಮಾತೋಶ್ರೀ ಕಲ್ಯಾಣಮ್ಮ ತಾಯಿಯವರ ನೂತನ ಮೂರ್ತಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಗುರುವಾರ ನೂರಾರು ಭಕ್ತ ಸಮೂಹದ ನಡುವೆ ಜರುಗಿತು. ಪಟ್ಟಣದ ಸೋಮಾಪುರ ಬಡಾವಣೆಯ ಆಂಜನೇಯ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಜಾಂಜ್, ಕರಡಿಮಜಲು, ವಿವಿಧ ವಾದ್ಯ ಮೇಳಗಳು ವಿಶೇಷ ಮೆರುಗು ತಂದುಕೊಟ್ಟವು. ಜಿ.ಟಿ. ಗುಡಿಸಾಗರ, ರಮೇಶಗೌಡ ಕರನಕಗೌಡ್ರ, ಸಿ.ಎಚ್. ಕೋರಿ, ರವಿ ಪಾಟೀಲ, ಶಿವಪ್ಪ ಬೋಳಶೆಟ್ಟಿ, ಸಂಕಪ್ಪ ಕೊಣ್ಣೂರ, ಶಂಕ್ರಣ್ಣ ವಾಳದ, ಡಾ. ವಿ.ಎಸ್. ಪಾಟೀಲ, ಭೀಮಪ್ಪ ಯಾವಗಲ್, ಸಿದ್ದು ಪಾಟೀಲ, ಎಸ್.ಆರ್. ಪಾಟೀಲ, ಕಲ್ಯಾಣಮ್ಮ ಭಕ್ತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.