ಕಡೂರು ತಾಲೂಕಿನ ಮಚ್ಚೇರಿ ಕುಂತೀಹೊಳೆ ಕಲ್ಯಾಣ ರಾಮ ದೇವಸ್ಥಾನದಲ್ಲಿ ರಾಮತಾರಕ ಹೋಮ ನಡೆಸಲಾಯಿತು. 
ಜಿಲ್ಲೆ

ಕಲ್ಯಾಣ ರಾಮ ದೇಗುಲ ವಾರ್ಷಿಕೋತ್ಸವ

ಎಸ್.ಎನ್.ರವೀಂದ್ರ

ಕಡೂರು: ಮಚ್ಚೇರಿ ಕುಂತೀಹೊಳೆ ಕಲ್ಯಾಣ ರಾಮ ದೇವಸ್ಥಾನದ 27ನೇ ವಾರ್ಷಿಕೋತ್ಸವ ಗುರುವಾರ ನಡೆಯಿತು.

ರಾಮ ದೇವರಿಗೆ ವಿಶೇಷ ಅಭಿಷೇಕದ ನಂತರ ಗಣಹೋಮ, ಹನುಮ ಸೂಕ್ತ ಹೋಮ, ರಾಮತಾರಕ ಹೋಮ, ಪೂರ್ಣಾಹುತಿ, ಅಷ್ಟಾವಧಾನ ಸೇವೆ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಬೆಂಕಿ ಲೋಕೇಶ್, ಕೋಶಾಧ್ಯಕ್ಷ ಎಂ.ಕೆ.ತಿಮ್ಮಯ್ಯ, ಕಾರ್ಯದರ್ಶಿ ಸುರೇಶ್, ಎಂ.ಟಿ.ಹನುಮಂತಯ್ಯ, ಎಂ.ಎಸ್.ಉಮಾಶಂಕರ್, ಟಿ.ಎಸ್.ಮೋಹನ್, ಕಡೂರು ದತ್ತಾತ್ರಿ ಇದ್ದರು.