ಔರಾದ್ ತಹಸಿಲ್‌ನಲ್ಲಿ ತಾಲೂಕು ಆಡಳಿತ ಮಂಗಳವಾರ ಏರ್ಪಡಿಸಿದ್ದ ಕಕ ಉತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಟಿ.ಎಂ.ಮಚ್ಚೆ ಅವರನ್ನು ಸನ್ಮಾನಿಸಲಾಯಿತು. ಶಾಸಕ ಪ್ರಭು ಚವ್ಹಾಣ್, ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಧೊಂಡಿಬಾ ನರೋಟೆ, ಸರುಬಾಯಿ ಘೂಳೆ, ರಾಧಾಬಾಯಿ ನರೋಟೆ, ಸುಧಾರಾಣಿ ನಾಯಕ, ಬೀರೇಂದ್ರಸಿಂಗ್ ಠಾಕೂರ್, ರಘುವೀರಸಿಂಗ್ ಠಾಕೂರ್, ಸ್ವಾಮಿದಾಸ, ಡಾ.ಗಾಯತ್ರಿ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಇತಿಹಾಸ ಅಧ್ಯಯನ ಮಾಡಲಿ

ರಾಜು ಯಮಕನಮರಡಿ

ಔರಾದ್: ಕಲ್ಯಾಣ ಕರ್ನಾಟಕಕ್ಕೆ ಸೆ.೧೭ ಅತ್ಯಂತ ಮಹತ್ವದ ದಿನವಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ಕ್ರಮದಿಂದ ಈ ಭಾಗಕ್ಕೆ ಸ್ವಾತಂತ್ರ್ಯದೊರಕಿದೆ. ವಿದ್ಯಾರ್ಥಿಗಳು ಇತಿಹಾಸ, ಪರಂಪರೆ ಅಧ್ಯಯನ ಮಾಡಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತ ಮಂಗಳವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ದೇಶ ಸ್ವಾತಂತ್ರ್ಯಗೊಂಡರೂ ನಮ್ಮ ಭಾಗ ನಿಜಾಮರ ಆಳ್ವಿಕೆಯಲ್ಲಿತ್ತು. ರಜಾಕಾರರ ಹಾವಳಿಯಿಂದ ಜನ ನಲುಗಿ ಹೋಗಿದ್ದರು. ಇದಕ್ಕೆ ಬಸವಕಲ್ಯಾಣದ ಗೋರ್ಟಾದಲ್ಲಿ ನಡೆದ ಹತ್ಯಾಕಾಂಡವೇ ಸಾಕ್ಷಿ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ದಿಟ್ಟ ಹೆಜ್ಜೆಯಿಂದಾಗಿ ಈ ಭಾಗ ಸ್ವತಂತ್ರವಾಯಿತು ಎಂದರು.

ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಧ್ವಜಾರೋಹಣ ನೆರವೇರಿಸಿದರು. ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಉಪಾಧ್ಯಕ್ಷೆ ರಾಧಾಬಾಯಿ ನರೋಟೆ, ಬಿಇಒ ಸುಧಾರಾಣಿ ನಾಯಕ, ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ಸಿಪಿಐ ರಘುವೀರಸಿಂಗ್ ಠಾಕೂರ್, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಆರೋಗ್ಯಾಧಿಕಾರಿ ಡಾ.ಗಾಯತ್ರಿ ಇತರರಿದ್ದರು.

ಸಂಪನ್ಮೂಲ ಶಿಕ್ಷಕ ಡಾ.ಶಾಲಿವಾನ ಉದಗೀರೆ ನಿರೂಪಣೆ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಶಾಸಕ ಚವ್ಹಾಣ್ ಪೂಜೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಾಸಕರು ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು. ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಟಿ.ಎಂ ಮಚ್ಚೆ ಅವರನ್ನು ಸನ್ಮಾನ ಮಾಡಲಾಯಿತು.