ಜಿಲ್ಲೆ

ಕಳಸಾಪೂರ ಬಸವಕೇಂದ್ರದಲ್ಲಿ ಸರ್​ ಸಿದ್ದಪ್ಪ ಕಂಬಳಿರವರ ಜನ್ಮದಿನಾಚರಣೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ ಇತ್ತೀಚೆಗೆ ಸರ್​ ಸಿದ್ದಪ್ಪ ಕಂಬಳಿಯವರ ಜನ್ಮ ದಿನಾಚರಣೆ, ವಚನಗೋಷ್ಠಿ ಆಚರಿಸಲಾಯಿತು.
ಬಸವ ಕೇಂದ್ರದ ಕಾರ್ಯಾಧ್ಯ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ, ಕಂಬಳಿ ಸಿದ್ದಪ್ಪ ಅವರು ಏಳು ಖಾತೆ ನಿಭಾಯಿಸುತ್ತಿದ್ದ ಮಂತ್ರಿ ಆಗಿದ್ದರು. ಹುಬ್ಬಳ್ಳಿಯಲ್ಲಿ ಜನಿಸಿದ ಕಂಬಳಿ ಸಿದ್ದಪ್ಪ ಅವರು ಕಡು ಬಡತನದಲ್ಲೇ ಬೆಳೆದವರು. ತಮ್ಮ ಪ್ರಾಥಮಿಕ ಶಿಣವನ್ನು ಲಕ್ಕುಂಡಿಯಲ್ಲಿ ಪೂರೈಸಿದರು. ಮುಂದಿನ ವಿದ್ಯಾಭ್ಯಾಸವನ್ನು ಪುಣೆಯಲ್ಲಿ ಪೂರೈಸಿದರು. ಅವರ ಮುಖಂಡತ್ವದ ವೈಖರಿಯನ್ನು ಗಮನಿಸಿದ ಅಂದಿನ ಬ್ರಿಟಿಷ್​ ಸರ್ಕಾರ ಅವರಿಗೆ "ಸರ್​' ಎಂಬ ಪದವಿಯನ್ನು ನೀಡಿ ಗೌರವಿಸಿತು. ಕನ್ನಡಿಗರ ಕಾಲಿಗೆ ನೆಲೆ ಮತ್ತು ಕಲೆಗೆ ಬೆಲೆ ಸಿಗಲೆಂದು ಸದಾ ಕಂಬಳಿ ಅವರು ಸದಾ ಆಶಿಸುತ್ತಿದ್ದರು ಎಂದರು. ಕಾರ್ಯಕ್ರಮದಲ್ಲಿ ವಚನಗೋಷ್ಠಿ ಜರುಗಿತು.
ಅಡಿವೆಪ್ಪ ರಾಮನಗೌಡರ, ಬಸವರಾಜ ಕಣವಿ, ಮಂಜುನಗೌಡ ಚ. ರಾಮನಗೌಡರ, ನಿಂಗಪ್ಪ ಇನಾಮತಿ, ಶಿವಪ್ಪ ಹುಯಿಲಗೋಳ, ಮಹಾದೇವಿ ಮಡಿವಾಳರ ಇದ್ದರು.