ಜಿಲ್ಲೆ

ಕಲ್ಸಂಕ ಜಂಕ್ಷನ್​ ಅರ್ನಿದಿಷ್ಟಾವಧಿ ಬಂದ್​

ಗೋಪಾಲಕೃಷ್ಣ ಪಾದೂರ್

ಉಡುಪಿ: ಕಲ್ಸಂಕ ಜಂಕ್ಷನ್​ನಲ್ಲಿ ಟ್ರಾಫಿಕ್​ ನಿಯಂತ್ರಣ ಮಾಡಲು ಪೊಲೀಸ್​ ಇಲಾಖೆ ವಿಲವಾಗಿದ್ದು, ಸಮಸ್ಯೆಯನ್ನು ಸಿಟಿ ಬಸ್​ ನಿಲ್ದಾಣ ಮತ್ತು ಕಡಿಯಾಳಿಯಾಗಿ ವರ್ಗಾಯಿಸಿದ್ದಾರೆ. ಜಂಕ್ಷನ್​ನಲ್ಲಿ ಅರ್ನಿದಿಷ್ಟಾವಧಿಗೆ ಬ್ಯಾರಿಕೇಡ್​ ಹಾಕಿ ಬಂದ್​ ಮಾಡಲಾಗಿದೆ.

ಮಕರ ಸಂಕ್ರಾಂತಿ ರಜೆ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಉಡುಪಿಗೆ ಆಗಮಿಸಲಿದ್ದಾರೆ ಎಂಬುದಾಗಿ ಭಾವಿಸಿದ್ದ ಪೊಲೀಸರು 1 ವಾರ ಜಂಕ್ಷನ್​ನಲ್ಲಿ ಬ್ಯಾರಿಕೇಡ್​ ಅಳವಡಿಸಿ ಗುಂಡಿಬೈಲಿನವರು ಕಡಿಯಾಳಿಯಲ್ಲಿ ಹಾಗೂ ಕೃಷ್ಣ ಮಠದಿಂದ ಬರುವವರು ಸಿಟಿ ಬಸ್​ ನಿಲ್ದಾಣದಲ್ಲಿ ಟೂರ್ಟನ್​ ತೆಗೆದುಕೊಂಡು ಬರುವಂತೆ ಸೂಚಿಸಿದ್ದರು. ಆದರೆ 1 ವಾರದ ಬಳಿಕವೂ ಬ್ಯಾರಿಕೇಡ್​ ತೆರವುಗೊಳಿಸಿಲ್ಲ. ಮಕ್ಕಳಿಗೆ ಪರೀೆಗಳು ಪ್ರಾರಂಭವಾಗಿರುವುದರಿಂದ ನಗರಕ್ಕೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಇನ್ನು ಎಪ್ರಿಲ್​ ಮತ್ತು ಮೇ ತಿಂಗಳಲ್ಲಿ ಸಂಚಾರ ದಟ್ಟಣೆ ಎದುರಾಗಲಿದೆ. 2 ತಿಂಗಳ ಮುನ್ನವೇ ಬ್ಯಾರಿಕೇಡ್​ ಅಳವಡಿಸಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ರಾಫಿಕ್​ ಕಂಬವಿದೆ ಲೈಟಿಲ್ಲ

ಕಲ್ಸಂಕದಲ್ಲಿ 2 ವರ್ಷದ ಹಿಂದೆ ನಗರಸಭೆಯಲ್ಲಿ ರ್ನಿಣಯಕೈಗೊಂಡು ಟ್ರಾಫಿಕ್​ ಸಿಗ್ನಲ್​ಗಾಗಿ ಬೃಹತ್​ ಕಂಬಗಳನ್ನು ನಿರ್ಮಿಸಲಾಗಿದೆ. ಕಾರಣಾಂತರಗಳಿಂದ ಇನ್ನೂ ಲೈಟ್​ ಅಳವಡಿಕೆ ಮಾಡಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಉದಾಸೀನ ಧೋರಣೆ ಅನುಸರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗ್ನಲ್​ ಅಳವಡಿಕೆ ಸಮಂಜಸವಲ್ಲ ಎಂಬುದು ಅಧಿಕಾರಿಗಳ ವಾದ. ವಾಸ್ತವದಲ್ಲಿ ನಗರದೊಳಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್​ ಲೈಟ್​ ಅಳವಡಿಸಲು ಕಾನೂನಿನಲ್ಲಿ ಅವಕಾಶವಿದೆ. ಅದಕ್ಕಿಂತಲೂ ಹೆಚ್ಚಾಗಿ ಕಡಿಯಾಳಿಯಿಂದ ಕರಾವಳಿ ಜಂಕ್ಷನ್​ವರೆಗಿನ ರಸ್ತೆ ರಾಷ್ಟ್ರೀಯ ಹೆದ್ದಾರಿ ಮಾನದಂಡದ ಪ್ರಕಾರ ನಿರ್ಮಾಣವಾಗಿಲ್ಲ.

ಆ್ಯಂಬುಲೆನ್ಸ್​ ಚಾಲಕರ ಪರದಾಟ ಅಂಬಲಪಾಡಿ ್ಲೆ$ ಓವರ್​ ಕಾಮಗಾರಿ ನಡೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್​ ರಸ್ತೆಯಲ್ಲಿ ವಾಹನ ದಟ್ಟಣೆ ಇದೆ. ಹೀಗಾಗಿ ಕುಂದಾಪುರ, ಕೋಟ, ಬ್ರಹ್ಮಾವರ ಮುಂತಾದ ಕಡೆಗಳಿಂದ ನಗರದ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆತರುವ ಆ್ಯಂಬುಲೆನ್ಸ್​ಗಳು ಅಂಬಾಗಿಲಿನಲ್ಲಿ ತಿರುವು ಪಡೆದು ಕಲ್ಸಂಕ ಮೂಲಕ ಸಿಟಿ ಬಸ್​ ನಿಲ್ದಾಣಕ್ಕೆ ತೆರಳವುತ್ತಿದ್ದವು. ಇದೀಗ ಬ್ಯಾರಿಕೇಡ್​ ಅಳವಡಿಸಿರುವುದರಿಂದ ಬೇರೆ ದಾರಿಯಿಲ್ಲದೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.

ನನ್ನ ಅವಧಿಯಲ್ಲಿ ಸ್ಮಾರ್ಟ್​ ಟ್ರಾಫಿಕ್​ ಸಿಗ್ನಲ್​ ಜಂಕ್ಷನ್​ ಯೋಜನೆ ರೂಪಿಸಲಾಗಿತ್ತು. ಇದರಿಂದ ನಗರಸಭೆಗೆ ಯಾವುದೇ ಖರ್ಚಿಲ್ಲದೆ ಪ್ರತಿ ತಿಂಗಳು 20 ಸಾವಿರ ಜಾಹೀರಾತು ತೆರಿಗೆ ಬರುವಂತೆ ಕ್ರಮ ವಹಿಸಲಾಗಿತ್ತು. ಕಾನೂನುಬದ್ಧವಾಗಿ ಟೆಂಡರ್​ ಮಾಡಿ ಕಾರ್ಯಾದೇಶವನ್ನು ನೀಡಲಾಗಿದೆ. ಆದರೆ ಕೆಲವು ಜನಪ್ರತಿನಿಧಿಗಳ ಆಕ್ಷೇಪಣೆಗಳಿಂದಾಗಿ ಲೈಟ್​ ಅಳವಡಿಕೆ ಬಾಕಿಯಾಗಿದೆ. ಕಲ್ಸಂಕ ಜಂಕ್ಷನ್​ನಲ್ಲಿ ಬ್ಯಾರಿಕೇಡ್​ ಅಳವಡಿಸಿರುವುದು ಸರಿಯಲ್ಲ. ಸಿಗ್ನಲ್​ ಹಾಕುವುದೇ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪರಿಹಾರ. ಕೆ. ರುಪತಿ ಭಟ್​, ಮಾಜಿ ಶಾಸಕರು, ಉಡುಪಿ