ಬೈಲಹೊಂಗಲ ಪಟ್ಟಣದ ಕಲ್ಪವೃಕ್ಷ ಶಾಲೆಯಲ್ಲಿ ಸ್ವಾತಂತ್ರೊೃೀತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಂದ ನೃತ್ಯ ಪ್ರದರ್ಶನ ಜರುಗಿತು. 
ಜಿಲ್ಲೆ

ಕಲ್ಪವೃಕ್ಷ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ಪಟ್ಟಣದ ಕಲ್ಪವೃಕ್ಷ ಮಾದರಿ ಶಾಲೆಯಲ್ಲಿ ಸ್ವಾತಂತ್ರೃ ದಿನವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷೆ ಮಂಗಳಾ ಢಮ್ಮಣಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಕ್ಕಳಲ್ಲಿ ಚಿಕ್ಕಂದಿನಿಂದ ರಾಷ್ಟ್ರಪ್ರೇಮ ಬೆಳೆಸಬೇಕು ಎಂದರು. ಪ್ರಾಚಾರ್ಯ ಹನಮೇಶ ದುಡ್ಯಾಳ ಮಾತನಾಡಿ, ಹಲವು ಮಹಾತ್ಮರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದ್ದು, ಅವರನ್ನು ಸದಾ ಸ್ಮರಿಸಬೇಕು ಎಂದರು.

ಶಾಲಾ ವಿದ್ಯಾರ್ಥಿ ಪ್ರತಿನಿಧಿ ಕಿಶನ್ ಹಾದಿಮನಿ ಮಾತನಾಡಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ದೇಶಾಭಿಮಾನ ಹಾಗೂ ಸಂಸ್ಕೃತಿ ಕುರಿತು ನಡೆದ ನೃತ್ಯ ಸ್ಪರ್ಧೆ ನೋಡುಗರ ಗಮನ ಸೆಳೆಯಿತು. ಆಡಳಿತ ಮಂಡಳಿ ಸದಸ್ಯ ದಿನಕರ ಜೋಶಿ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಇತರರು ಇದ್ದರು. ಅದಿತಿ ಎ.ಸ್ವಾಗತಿಸಿದರು. ಶುಶೃತ ಮೆಟಗುಡ್ಡ ನಿರೂಪಿಸಿದರು.