ಜಿಲ್ಲೆ

ಕಲ್ಮೇಶ್ವರ ದೇವಸ್ಥಾನದ ನೂತನ ಗೋಪುರದ ಸಂಕಲ್ಪ

Gadag - Desk - Tippanna Avadoot

ಕಲಘಟಗಿ: ಪಟ್ಟಣದ ಜೋಶಿ ಓಣಿಯ ಕಲ್ಮೇಶ್ವರ (ಈಶ್ವರ) ದೇವಸ್ಥಾನದ ನೂತನ ಗೋಪುರದ ಸಂಕಲ್ಪವನ್ನು ಸೋಮವಾರ ವಿಶೇಷ ಪೂಜೆಗಳೊಂದಿಗೆ ನೆರವೇರಿಸಲಾಯಿತು.

ದೇವರಿಗೆ ವಿಶೇಷ ಅಲಂಕಾರ ಮತ್ತು ಬಿಲ್ವಪತ್ರೆ ಅರ್ಚನೆ ಮಹಾಪೂಜೆಯೊಂದಿಗೆ ನೂತನ ಗೋಪುರದ ಸಂಕಲ್ಪವನ್ನು ಮಾಡಿದರು.

ಈ ಸಂದರ್ಭದಲ್ಲಿ ವೇ.ಮೂ. ಪಾಂಡುರಂಗ ಜೋಶಿ, ವೇ.ಮೂ. ಸುಬ್ರಹ್ಮಣ್ಯ ಭಟ್, ಶಿವಶಂಕರ ರಾಟಿ, ಬಸವರಾಜ ಬಳಿಗೇರ, ನರೇಶ ಖಟಾವಕರ, ಗಿರಿಮಲ್ಲಯ್ಯ ಹುಬ್ಬಳ್ಳಿಮಠ, ಮಲ್ಲೇಶ ಗೌಡಣ್ಣವರ, ಈರಣ್ಣ ಅಂಗಡಿ, ಬಸವರಾಜ ವಾಲಿಶೆಟ್ಟರ, ಮಲ್ಲಿಕಾರ್ಜುನಯ್ಯ ಹುಬ್ಬಳ್ಳಿಮಠ, ಪಾರ್ಶ್ವನಾಥ ಬಾಳಿಕಾಯಿ, ದೀಪಕ ಎಂ. ಪಂಡಿತ, ರಾಘವೇಂದ್ರ ಖಟಾವಕರ, ದತ್ತಾತ್ರೇಯ ವಂಡಕರ, ಪ್ರಕಾಶ ಖಟಾವಕರ, ಪವನ ಸಾವಕಾರ ಸೇರಿದಂತೆ ದೇವಸ್ಥಾನದ ಭಕ್ತರು, ಟ್ರಸ್ಟ್ ಕಮಿಟಿ ಪ್ರಮುಖರು ಇದ್ದರು.