ಜಿಲ್ಲೆ

ಕಲ್ಮೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಶತಮಾನೋತ್ತರ ಇತಿಹಾಸ ಹೊಂದಿರುವ ನಗರದ ಕೆಲಗೇರಿಯ ಕಲ್ಮೇಶ್ವರ ದೇವರ 25ನೇ ವರ್ಷದ ಜಾತ್ರಾ ಮಹೋತ್ಸವವು ಮೇ 9ರಿಂದ 13ರವರೆಗೆ ಜರುಗಲಿದೆ ಎಂದು ದೇವಸ್ಥಾನ ಟ್ರಸ್ಟ್​ ಕಮಿಟಿ ಅಧ್ಯಕ್ಷ ರುದ್ರಗೌಡ ಪಾಟೀಲ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆ ನಿಮಿತ್ತ ವಿವಿಧ ಧಾಮಿರ್ಕ ಹಾಗೂ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಮೇ 9ರಂದು ಬೆಳಗ್ಗೆ 9 ಗಂಟೆಗೆ ಸುಳ್ಳದ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧ ರಾಮೇಶ್ವರ ಶಿವಾಚಾರ್ಯರ ಹಸ್ತದಿಂದ ಕಳಸಾರೋಹಣ, ಸಂಜೆ 4ಕ್ಕೆ ಉಚ್ಛಾಯ ಕಾರ್ಯಕ್ರಮ ವಿಶೇಷವಾಗಿದ್ದು, ಮಹಾರಾಷ್ಟ್ರದ ಕುಂತಲಗಿರಿಯ ಗಜಲಕ್ಷಿ$್ಮ (ಆನೆ) ಮೆರವಣಿಗೆ ಗ್ರಾಮದಲ್ಲಿ ನಡೆಯಲಿದೆ ಎಂದರು.
ಮೇ 10ರಂದು ಬೆಳಗ್ಗೆ 5 ಗಂಟೆಗೆ ಕಲ್ಮೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಜರುಗುವುದು. ಮಧ್ಯಾಹ್ನ 12.30ಕ್ಕೆ ಅನ್ನಪ್ರಸಾದ, ಸಂಜೆ 4.30ಕ್ಕೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧ ರಾಮೇಶ್ವರ ಸ್ವಾಮೀಜಿ ಹಸ್ತದಿಂದ ಸಕಲ ವಾದ್ಯ ಮೇಳಗಳಿಂದ ಮಹಾರಥೋತ್ಸವ ಜರುಗಲಿದೆ. ರಥೋತ್ಸವದ ಮೆರವಣಿಗೆಯಲ್ಲಿ ಕುಂದಾಪುರದ ಚಂಡಿ ಹಾಗೂ ಮಾಗಡಿಯ ಬ್ಯಾಂಡ್​ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಮೇ 10ರ ರಾತ್ರಿ 10.30ಕ್ಕೆ ಕೆಲಗೇರಿಯ ಸಿದ್ಧಲಿಂಗೇಶ್ವರ ನವ ತರುಣ ನಾಟ್ಯ ಸಂದಿಂದ ಆದರ್ಶ ಪ್ರೇಮ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಗ್ರಾಮದ ಅಯ್ಯಪ್ಪಸ್ವಾಮಿ ಟ್ರಸ್ಟ್​ನಿಂದ ಮೇ 10ರಂದು ಬೆಳಗ್ಗೆ 8 ಗಂಟೆಗೆ ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ, ಮೇ 11ರಂದು ದೇವಸ್ಥಾನದಲ್ಲಿ ಸಂಜೆ 5ಕ್ಕೆ ಭಜನಾ ಕಾರ್ಯಕ್ರಮ, ಮೇ 12ರಂದು ಸಂಜೆ 4ಕ್ಕೆ ಕೆಲಗೇರಿ ಕೆರೆ ಆವರಣದಲ್ಲಿ ಕೇಸರಿ ಗೆಳೆಯರ ಬಳಗದಿಂದ ಟಗರಿನ ಕಾಳಗ, ಮೇ 13ರಂದು ಸಂಜೆ 6ಕ್ಕೆ ಕಡಬಿನ ಕಾಳಗ ಹಾಗೂ ಮೇ 14ರಂದು ಬೆಳಗ್ಗೆ 10 ಗಂಟೆಗೆ ಅಯ್ಯಪ್ಪಸ್ವಾಮಿ ಟ್ರಸ್ಟ್​ನಿಂದ ಕೆಲಗೇರಿ ಕೆರೆ ಆವರಣದಲ್ಲಿ ಹಿಮ್ಮುಖವಾಗಿ ಟ್ರ್ಯಾಕ್ಟರ್​ ಓಡಿಸುವ ಸ್ಪರ್ಧೆ ನಡೆಯಲಿದೆ ಎಂದರು.
ಸಮಿತಿ ಕಾರ್ಯದಶಿರ್ ಪ್ರಭು ಅಜಗೊಂಡನವರ, ಶಂಕರ ಕೊಟ್ರಿ, ಈರಣ್ಣ ಹಳವದ, ಚನ್ನಬಸು ಹೊಂಗಲಮಠ, ಮಂಜುನಾಥ ಗುಡ್ಡದಮಠ, ರುದ್ರಯ್ಯ ಕಲ್ಮಠ, ಗಿರಿಯಪ್ಪ ಸಿದ್ದಪ್ಪಗೌಡರ, ಇತರರು ಇದ್ದರು.