ಜಿಲ್ಲೆ

ಕಲ್ಲೇಸೋಮನಹಳ್ಳಿ ಏತನೀರಾವರಿ ಯೋಜನೆ ಮಾರ್ಚ್‌ಗೆ ಪೂರ್ಣ

ಬಾಲಮುರಳಿಕೃಷ್ಣ

ಬಾಗೂರು: ಹತ್ತೊಂಬತ್ತು ಕೆರೆಗಳಿಗೆ 37 ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ ನದಿ ನೀರು ತುಂಬಿಸುವ ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಮಾರ್ಚ್ ವೇಳೆಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಮಾದಗುಡ್ಡನಹಳ್ಳಿ ಬಡಾವಣೆಯಲ್ಲಿ 53 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶಿವರ, ಕೆಂಬಾಳು, ತಗಡೂರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರೆ, ಬಳಗಟ್ಟ, ಕೆಂಬಾಳು, ಮುತ್ತಿನ ಕಟ್ಟೆ, ಮಾದಗುಡ್ಡನಹಳ್ಳಿ, ಹೊಂಗೆಹಳ್ಳಿ, ಸೋಮನಹಳ್ಳಿ, ಕಾಮನಹಳ್ಳಿ, ಎಂಕೆ ಹೊಸೂರು, ಕಾಳ ಮಾರನಹಳ್ಳಿ, ಒಬಳಾಪುರ, ಕಲ್ಲೇ ಸೋಮನಹಳ್ಳಿ, ಕಾಮನಾಯಕನಹಳ್ಳಿ, ರಂಗಾಪುರ, ತಗಡೂರು, ಲಕ್ಕರಸನಹಳ್ಳಿ, ಕೆರೆಗಳಿಗೆ ಮುಂದಿನ ಹಂಗಾಮಿನಲ್ಲಿ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಭೂದೇಶ್, ಇಂಜಿನಿಯರ್‌ಗಳಾದ ರುಕ್ಮಿಣಿ, ಚಂದ್ರಶೇಖರ್, ಕೆ.ಕೆ. ಕನ್‌ಸ್ಟಕ್ಷನ್ ಅಭಿಷೇಕ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮರಿ ದೇವೇಗೌಡ, ಗುತ್ತಿಗೆದಾರ ತೋಟಿ ನಾಗರಾಜ್, ಸ್ಥಳೀಯ ಮುಖಂಡರಾದ ವಳಗೇರಹಳ್ಳಿ ಮಂಜುನಾಥ್, ಶಿವರ ರಾಜು, ನೇರಲಕೆರೆ ಇಂದ್ರಜಿತ್, ಕೆಂಚೇಗೌಡ, ರಂಗಸ್ವಾಮಿ, ರಂಗಮ್ಮ, ಹೊನ್ನಮ್ಮ, ಶಿವಮ್ಮ, ಇತರರು ಹಾಜರಿದ್ದರು.