ಜಿಲ್ಲೆ

ಎಂಟು ಮತ ಪಡೆದ ಕಲ್ಲಪ್ಪಗೆ ಗೆಲುವು

ಪ್ರಶಾಂತ ಹೂಗಾರ

ರಾಯಬಾಗ: ತಾಲೂಕಿನ ಕಟಕಬಾವಿ ಗ್ರಾಪಂ 2ನೇ ಅವಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಲ್ಲಪ್ಪ ಯಲ್ಲಪ್ಪ ಮೂಡಲಗಿ (ಸಾಮಾನ್ಯ) ಹಾಗೂ
ಉಪಾಧ್ಯಕ್ಷರಾಗಿ ಲಕ್ಕವ್ವ ರಾಮಪ್ಪ ಮೆಳವಂಕಿ (ಸಾಮಾನ್ಯ ಮಹಿಳೆ) ಆಯ್ಕೆಯಾದರು.

ಕಟಕಬಾವಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಲ್ಲಪ್ಪ ಮೂಡಲಗಿ, ಲಕ್ಕವ್ವ ಮೆಳವಂಕಿ ಅವರಿಗೆ ಚುನಾವಣಾಕಾರಿ ಶೇಖರ ರಾಠೋಡ ಪ್ರಮಾಣಪತ್ರ ವಿತರಿಸಿದರು. ರಾಜು ಮಾಳಗೆ, ಬಸಪ್ಪ ಗಂಜಾಳಿ, ಬಾಳಪ್ಪ ಮಗದುಮ್ಮ, ಫಕೀರವ್ವ ಪಾತ್ರೋಟ, ಪ್ರತಿಭಾ ದೇಸಾಯಿ, ಸತ್ಯವ್ವ ಮಾಂಗ, ನಿಂಗಪ್ಪ ಪಕಾಂಡ, ರೇವಪ್ಪ ಮಾಳಿ, ನಿಂಗಪ್ಪ ಪಾತ್ರೋಟ ಇದ್ದರು.

15 ಸದಸ್ಯ ಬಲದ ಗ್ರಾಪಂನಲ್ಲಿ ಕಲ್ಲಪ್ಪ ಮೂಡಲಗಿ 8 ಮತ ಪಡೆದು ಗೆದ್ದರೆ, ಪ್ರತಿಸ್ಪರ‌್ ಗೋಪಾಲ ಬಿದರಿ 7 ಮತ ಪಡೆದರು. ಲಕ್ಕವ್ವ ಮೆಳವಂಕಿ 8 ಮತ ಪಡೆದು ಗೆದ್ದರೆ, ಪ್ರತಿಸ್ಪರ‌್ ಶಾಂತಾ ಪಾಟೀಲ 7 ಮತ ಪಡೆದರು.
ಚುನಾವಣಾಕಾರಿಯಾಗಿ ಕಂಕಣವಾಡಿ ಜೆಎಲ್‌ಬಿಸಿ ಇಲಾಖೆಯ ಎಇಇ ಶೇಖರ ರಾಠೋಡ, ಸಹಾಯಕ ಚುನಾವಣಾರಿಯಾಗಿ ಪಿಡಿಒ ಮಂಜುನಾಥ ತಳವಾರ ಕಾರ್ಯನಿರ್ವಹಿಸಿದರು.

ರಾಜು ಮಾಳಗೆ, ಬಸಪ್ಪ ಗಂಜಾಳಿ, ಬಾಳಪ್ಪ ಮಗದುಮ್ಮ, ಫಕೀರವ್ವ ಪಾತ್ರೋಟ, ಪ್ರತಿಭಾ ದೇಸಾಯಿ, ಸತ್ಯವ್ವ ಮಾಂಗ, ನಿಂಗಪ್ಪ ಪಕಾಂಡ, ರೇವಪ್ಪ ಮಾಳಿ, ನಿಂಗಪ್ಪ ಪಾತ್ರೋಟ, ಸತ್ಯಪ್ಪ ಪಾಟೀಲ, ಸಿಕಂದರ ಶಿಲ್ಲೆದಾರ, ಈರಪ್ಪ ಮಗದುಮ್ಮ, ಸಿದ್ದಗೌಡ ಕಬಾಡಗಿ, ಹನಮಂತ ಗುಜನಟ್ಟಿ, ಬಾಳಗೌಡ ಪಾಟೀಲ ಇತರರು ಇದ್ದರು. ಪಿಎಸ್‌ಐ ಐಶ್ವರ್ಯ ನಾಗರಾಳ ನೇತತ್ವದಲ್ಲಿ ಭದ್ರತೆ ಕೆಗೊಳ್ಳಲಾಗಿತ್ತು.