| ಮಂಜುನಾಥ ಹುಡೇದ ಬೆಳಗಾವಿ
ಸಾಂಪ್ರದಾಯಿಕ ಕೃಷಿ ಕೈಗೊಳ್ಳುವುದರ ಜತೆಗೆ ಹೊಸ ಪ್ರಯೋಗ ಹಾಗೂ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಯಲ್ಲಿ ಆದಾಯ ಕಂಡುಕೊಂಡಿದ್ದಾರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸಾವಯವ ಕೃಷಿಕ ಕಲ್ಲಪ್ಪ ಮಾಳಿ. ಕಬ್ಬು ಬೆಳೆದು ಜೀವನೋಪಾಯದ ಲೆಕ್ಕದಲ್ಲಿ ಲಾಭಕ್ಕೆ ಮುಖ ಮಾಡಿದ್ದ ಕಲ್ಲಪ್ಪ ಬಳಿಕ ಮಿಶ್ರ ಬೇಸಾಯದತ್ತ ಒಲವು ತೋರಿದರು. ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಿಂದ ಮಾಹಿತಿ ಪಡೆದು ರೇಷ್ಮೆ ಬೇಸಾಯಕ್ಕೆ ಮುಂದಾದ ಕಲ್ಲಪ್ಪ ಅದರಲ್ಲಿ ಸಾಕಷ್ಟು ಲಾಭ ಗಳಸಿದ್ದಾರೆ. ಕಲ್ಲಪ್ಪ ಅವರ ಗದ್ದೆಯಲ್ಲಿ ಈಗ 6 ರಿಂದ 12 ಅಡಿ ಉದ್ದ-ಅಗಲ ಸ್ಥಳದಲ್ಲಿ ರೇಷ್ಮೆ ಗಿಡಗಳು ಬೆಳೆದು ನಿಂತಿವೆ.
ರೈತರು ತಮಗಿರುವ ಕಡಿಮೆ ಜಮೀನಿನಲ್ಲೇ ಹುಲುಸಾದ ಬೆಳೆ ತೆಗೆದು ಹೆಚ್ಚಿನ ಆದಾಯ ಪಡೆಯಲು ಸಾಕಷ್ಟು ಅವಕಾಶವಿದೆ. ಸಾಂಪ್ರದಾಯಿಕ ಕೃಷಿ ಮಾಡಿದರೂ ಅದರಲ್ಲೇ ಹೊಸ ಪ್ರಯೋಗ ಮಾಡಬೇಕು. ನೀರಿನ ಸದ್ಬಳಕೆ ಹಾಗೂ ವೆಚ್ಚ ನಿಯಂತ್ರಣ, ಮಾರುಕಟ್ಟೆ ಹುಡುಕಿಕೊಳ್ಳುವ ಚಾಕಚಕ್ಯತೆ ಸಾಧ್ಯವಾದರೆ ಕೃಷಿಯಲ್ಲಿ ಗೆಲುವು ಕಾಣುವುದು ಕಷ್ಟವೇನಲ್ಲ. | ಕಲ್ಲಪ್ಪ ಮಾಳಿ ಸಾವಯವ ಕೃಷಿಕ, ಹಿಡಕಲ್ (ರಾಯಬಾಗ ತಾಲೂಕು)