ಬಂಟ್ವಾಳ: ಕಲ್ಲಡ್ಕ ವಲಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಥ್ರೋಬಾಲ್ ಪಂದ್ಯಾಟ, ಅಮ್ಟೂರಿನ ದೇವಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ವಲಯ ದೈಹಿಕ ಶಿಕ್ಷಣ ನೋಡಲ್ ಅಧಿಕಾರಿ ಜಗದೀಶ್ ಶುಭಹಾರೈಸಿದರು. ಸಂಚಾಲಕ ಅನಿಲ್ ಕೆನ್ಯೂಟ್ ಡಿಮೆಲ್ಲೊ ಕ್ರೀಡಾಂಗಣ ಉದ್ಘಾಟಿಸಿದರು.
ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಸಂತೋಷ್ ಡಿಸೋಜ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಜನಾರ್ದನ್ ಕೆ.ವಿ, ಸಂತ ಆಂತೋನಿ ಶಾಲೆ ಮುಖ್ಯಶಿಕ್ಷಕಿ ಆ್ಯನಿ ಡಿಸೋಜ, ದೈಹಿಕ ಶಿಕ್ಷಕರ ಗ್ರೇಡ್-2 ತಾಲೂಕು ಸಂಘದ ಅಧ್ಯಕ್ಷ ಇಂದುಶೇಖರ್ ಕುಲಾಲ್ ಹಾಗೂ ಕಲ್ಲಡ್ಕ ವಲಯದ ಎಲ್ಲ ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕ-ರಕ್ಷಕ ಕಾರ್ಯಕಾರಿ ಸಮಿತಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ನರಿಕೊಂಬು ಶಾಲೆ ಪ್ರಥಮ, ದೇವಮಾತಾ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಮತ್ತು ಬಾಲಕಿಯರ ವಿಭಾಗದಲ್ಲಿ ದೇವಮಾತಾ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ದ್ವಿತೀಯ ಸ್ಥಾನವನ್ನು ಸಂತ ಅಂತೋನಿ ಶಾಲೆ ಗಳಿಸಿತು.
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಬಾಲವಿಕಾಸ ಮಾಣಿ ಪ್ರಥಮ, ದೇವಮಾತ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಮತ್ತು ಬಾಲಕಿಯರ ವಿಭಾಗದಲ್ಲಿ ಬಾಲವಿಕಾಸ ಮಾಣಿ ಪ್ರಥಮ, ದೇವಮಾತ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು ದ್ವಿತೀಯ ಸ್ಥಾನ ಗಳಿಸಿತು.
ಮುಖ್ಯ ಶಿಕ್ಷಕ ನವೀನ್ ಪ್ರಕಾಶ್ ಪಿಂಟೋ ಸ್ವಾಗತಿಸಿದರು. ಶಿಕ್ಷಕಿಯರಾದ ಲಿನೆಟ್ ಮತ್ತು ಅರುಣಾ ವಂದಿಸಿದರು. ಅನಿತಾ ಮತ್ತು ನಯನಾ ಕಾರ್ಯಕ್ರಮ ನಿರೂಪಿಸಿದರು.