ಜಿಲ್ಲೆ

ತಾದ್ಯಾತ್ಮಕತೆ ಇಲ್ಲದೆ ಯಶಸ್ಸು ಅಸಾಧ್ಯಕಲ್ಲಚ್ಚು ಪ್ರಶಸ್ತಿ ಸ್ವೀಕರಿಸಿ ಸಾಹಿತಿ ತುರುವೇಕೆರೆ ಪ್ರಸಾದ್ ಅಭಿಮತ

ಹರೀಶ ಎಂ.

ಮಂಗಳೂರು: ಸಾಹಿತ್ಯ, ಕಿರುತೆರೆ ಮತ್ತು ಸಿನಿಮಾರಂಗದ ಬರವಣಿಗೆ ಕ್ಷೇತ್ರದಲ್ಲಿ ನಿರಂತರ ಅಧ್ಯಯನ ಹಾಗೂ ತಾದ್ಯಾತ್ಮಕತೆ ಇಲ್ಲದೆ ಯಶಸ್ಸು ಖಂಡಿತ ಅಸಾಧ್ಯ. ವಿಪುಲ ಅವಕಾಶ ಇರುವ ಈ ಕ್ಷೇತ್ರಕ್ಕೆ ಪಾದರ್ಪಣೆ ಮಾಡುವ ಯುವ ಜನತೆ ಇದನ್ನು ಸ್ಪಷ್ಟ ಮನಗಂಡು ಮುನ್ನಡೆಯಬೇಕೆಂದು ಹಿರಿಯ ಸಾಹಿತಿ ತುರುವೇಕೆರೆ ಪ್ರಸಾದ್ ಹೇಳಿದರು.


ಅವರು ಮಂಗಳೂರಿನ ಕಲ್ಲಚ್ಚು ಪ್ರಕಾಶನದ 14 ನೇಯ ಆವೃತ್ತಿಯ 2023ರ ಪ್ರತಿಷ್ಠಿತ ಕಲ್ಲಚ್ಚು ಪ್ರಶಸ್ತಿ ಸ್ವೀಕರಿಸಿ, ಕಿರುತೆರೆ ಚಲನಚಿತ್ರ ರಂಗದ ಬರವಣಿಗೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.


ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿ ಸಾಹಿತ್ಯದ ಮೂಲಮಂತ್ರವಾಗಿರುವ ಕನ್ನಡ ಶಾಲೆಗಳನ್ನು ಉಳಿಸುವ ಕೈಂಕರ್ಯವನ್ನು ನಾವು ಕಟಿಬದ್ದರಾಗಿ ಮಾಡುವಂತೆ ಕರೆ ನೀಡಿದರು.


ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಪ್ರೊ.ಪಿ. ಕೃಷ್ಣಮೂರ್ತಿ ಅಭಿನಂದನಾ ಮಾತುಗಳಾನ್ನಡಿದರು. ಈ ಸಂದರ್ಭದಲ್ಲಿ ಮೊಹಬ್ಬತ್ ಕಾ ದಾಗ ಕಥಾಸಂಕಲನ ಬಿಡುಗಡೆಗೊಂಡಿತು. ವಿಶ್ರಾಂತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಟಣ. ಡಾ.ವಿಜಯಲಕ್ಷ್ಮಿ ನೇರಳಕೋಡಿ, ಶ್ರೀನಿಧಿ ಆರ್.ಎಸ್, ಮೌಶೀರ್ ಅಹಮದ್ ಸಾಮಣಿಗೆ, ಡಾ.ಮೀನಾಕ್ಷಿ ರಾಮಚಂದ್ರ, ಪ್ರೊ.ಡಾ.ಝೀಟಾ ಲೋಬೊ, ಲೇಖಕ ಎನ್.ವಿ. ಪೌಲೋಸ್, ಮಾರ್ಷಲ್ ಡಿಸೋಜ, ಕಲಾವಿದರಾದ ವಿಜಯಕುಮಾರ್ ಕೊಡಿಯಲ್ ಬೈಲ್, ರಾಜೇಂದ್ರ ಕೇದಿಗೆ ಮೊದಲಾದವರು ಉಪಸ್ಥಿತರಿದ್ದರು.


ಮಹೇಶ ಆರ್ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಯುವಚಿತ್ರ ಕಲಾವಿದೆ ಬೆಂಗಳೂರಿನ ಶಾರ್ವೀ ನಾಕ್ ಅವರನ್ನು ಅಭಿನಂದಿಸಲಾಯಿತು.