ರಿಷಿ ಗೆಜ್ಜೆ ಸಂಭ್ರಮದಲ್ಲಿ ಕಲಾವಿದ ಜಗದೀಶ ಗೌಡ ಬೋಳಂತೂರು ಅವರನ್ನು ಸನ್ಮಾನಿಸಿಲಾಯಿತು. ಎಸ್.ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು. ತಾರಾನಾಥ ಗಟ್ಟಿ ಕಾಪಿಕಾಡ್, ಚಿತ್ತರಂಜನ್ ಬೋಳಾರ್, ದೀಪಕ್ ಪೂಜಾರಿ ಮೊದಲಾದವರಿದ್ದರು.
ಮಂಗಳೂರು: ನಮ್ಮ ಯಾವುದೇ ಕಲೆಯಲ್ಲಿ ವಿಕೃತಿ ಕಂಡು ಬಂದಲ್ಲಿ ಅದನ್ನು ದೂರ ಇಡೋಣ. ಆದರೆ ಕಾನೂನಿನ ಹೆಸರಿನಲ್ಲಿ ನಮ್ಮ ಕಲೆ, ಸಂಸ್ಕೃತಿಯನ್ನು ನಾಶ ಮಾಡುವ ಕೆಲಸ ಆಗುತ್ತಿದೆ. ಜನರಿಗೆ ಮನವರಿಕೆ ಮಾಡುವ ಮೂಲಕ ವಿಕೃತಿಯನ್ನು ಹೋಗಲಾಡಿಸಬೇಕೇ ವಿನಃ ಕಾನೂನು ಮೂಲಕ ಅಲ್ಲ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಉರ್ವಸ್ಟೋರ್ ತುಳು ಭವನದ ಸಿರಿ ಚಾವಡಿ ಸಭಾಂಗಣದಲ್ಲಿ ಶನಿವಾರ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ವತಿಯಿಂದ ರಿಷಿ ಕಲಾ ಕೇಂದ್ರದ ವಾರ್ಷಿಕೋತ್ಸವ ಹಾಗೂ ತರಬೇತಿ ಪಡೆದ ವಿದ್ಯಾರ್ಥಿಗಳ ಯಕ್ಷಗಾನ ರಂಗ ಪ್ರವೇಶ ರಿಷಿ ಗೆಜ್ಜೆ ಸಂಭ್ರಮ 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಯಕ್ಷಗಾನ ಕಲೆಯ ಆಸ್ವಾದನೆಗೆ ಸಭ್ಯ ಪ್ರೇಕ್ಷಕರ ಅಗತ್ಯ ಎಷ್ಟಿದೆಯೋ ಅಷ್ಟೇ ಸಭ್ಯ ಕಲಾವಿದರ ತುರ್ತು ಅಗತ್ಯ ಈ ಕಾಲಕ್ಕಿದೆ ಎಂದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀಧರ್ ಎಂ ಮಾತನಾಡಿ ಯಕ್ಷಗಾನ ಕಲೆಯ ಮೂಲಕ ರಿಷಿ ಪ್ರತಿಷ್ಠಾನ ಮಕ್ಕಳಲ್ಲಿ ಸಂಭ್ರಮವನ್ನು ತುಂಬುವ ಕೆಲಸ ಮಾಡುತ್ತಿದೆ ಎಂದರು.
ಗೆಜ್ಜೆ ಗಿರಿ ಮೇಳದ ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಜಗದೀಶ ಗೌಡ ಬೋಳಂತೂರು ಅವರನ್ನು ಸನ್ಮಾನಿಸಿಲಾಯಿತು.
ಕಲಾಕೇಂದ್ರದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಯಕ್ಷಗಾನ ಗುರು ವಿಶ್ವನಾಥ ಪದ್ಮುಂಜ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ
ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಉಪಾಧ್ಯಕ್ಷ ಕೊರಗಪ್ಪ ಶೆಟ್ಟಿ, ಗ್ರಾಫಿಕ್ಸ್ ಡಿಸೈನರ್ ಸುಧಾಕರ್ ಆಚಾರ್ಯ ಇವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ಮಾಜಿ ಮನಾಪ ಸದಸ್ಯ ದೀಪಕ್ ಪೂಜಾರಿ,ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್,ದ.ಕ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ ಎಚ್,ಉದ್ಯಮಿಗಳಾದ ಶಿವಪ್ರಸಾದ್ ಪ್ರಭು,ರಾಜೇಶ್ ಶೆಟ್ಟಿ ಗೊಲ್ಲರಬೆಟ್ಟು,ಶಂಕರನಾರಾಯಣ ಮಂಗಳೂರು,ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಉಪನ್ಯಾಸಕಿ ಡಾ. ಆಶಾಲತಾ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಉಪಾಧ್ಯಕ್ಷ ಕೊರಗಪ್ಪ ಶೆಟ್ಟಿ ಶುಭ ಹಾರೈಸಿದರು.
ಪ್ರತಿಷ್ಠಾನದ ಸಂಸ್ಥಾಪಕ ದಿವಾಕರ್ ಪದ್ಮುಂಜ, ಅಧ್ಯಕ್ಷ ಅವಿನಾಶ್ ಕುಲಾಲ್,ಪತ್ರಕರ್ತ ಉಮೇಶ್ ಶೆಟ್ಟಿ, ಕಲಾ ಕೇಂದ್ರದ ಅಧ್ಯಕ್ಷೆ ವಸುಧಾ ಯು. ಶೆಟ್ಟಿ, ಕೀರ್ತನ ಕುಲಾಲ್, ಜಯಂತಿ, ಸಂಗೀತ ಸುವರ್ಣ, ಶುಭಲಕ್ಷ್ಮಿ, ರಾಧಾ ಶ್ರೀಧರ್, ಸುಜಾತ ಉಪಸ್ಥಿತರಿದ್ದರು.
ವಸುಧ ಸ್ವಾಗತಿಸಿದರು. ನಯನ ಆಚಾರ್ಯ ವಂದಿಸಿದರು. ದೇವಿಕಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.ರಿಷಿ ಕಲಾಕೇಂದ್ರದಲ್ಲಿ ತರಬೇತಿ ಪಡೆದ ವಿಧ್ಯಾರ್ಥಿಗಳಿದ ಮಹಿಷ ವಧೆ ಯಕ್ಷಗಾನ ಪ್ರದರ್ಶನಗೊಂಡಿತು.