ಜಿಲ್ಲೆ

ಕಲ್ಕಾರಿನಲ್ಲಿ ಏ.21ರಂದು ಶ್ರೀ ನಾಗದೇವರ, ಶ್ರೀ ಮಹಮ್ಮಾಯಿ ಅಮ್ಮ, ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ದೈವಗಳ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ವಿಟ್ಲ: ಕಲ್ಕಾರು ಕುಟುಂಬಸ್ಥರ ಶ್ರೀ ನಾಗದೇವರ, ಶ್ರೀ ಮಹಮ್ಮಾಯಿ ಅಮ್ಮ, ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ದೈವಗಳ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಏ.೨೧ರಂದು ನಡೆಯಲಿದೆ. ಸುಮಾರು ೨೫ ಲಕ್ಷ ವೆಚ್ಚದಲ್ಲಿ ೩೭ ದಿನಗಳಲ್ಲಿ ದೈವಸ್ಥಾನ ಹಾಗೂ ನಾಗದೇವರ ಚಿತ್ರ ಕೂಟ ನಿರ್ಮಾಣವಾಗಿದೆ ಎಂದು ಕಲ್ಕಾರು ದೈವ ದೇವರುಗಳ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಹೇಳಿದರು.

ಸುಮಾರು ೩೦ ವರ್ಷಗಳ ಹಿಂದೆ ಬಾಲಕೃಷ್ಣ ರೈ ಚೊಕ್ಕಾಡಿ ರವರ ಮುಂದಾಳುತ್ವದಲ್ಲಿ, ಕುಟುಂಬದ ಹಿರಿಯರು ಸೇರಿಕೊಂಡು ಪಯ್ಯನೂರು ಮಾಧವ ಪೊದುವಾಳರ ನೇತೃತ್ವದಲ್ಲಿ ಅಷ್ಟ ಮಂಗಳ ಪ್ರಶ್ನೆಯನ್ನು ನಡೆಸಿ ಕಲ್ಕಾರಿನಲ್ಲಿ ಕುಟುಂಬದ ದೈವಗಳನ್ನು ಮತ್ತು ನಾಗ ದೇವರನ್ನು ಆರಾಧಿಸಬೇಕು ಎಂದು ಕಂಡು ಬಂದ ಪ್ರಕಾರ, ಕಲ್ಕಾರು ಲಕ್ಷ್ಮೀ ಸಿ ಶೆಟ್ಟಿ ಮತ್ತು ಮಕ್ಕಳು, ನಾರಾಯಣ ಅಡ್ಯಂತಾಯ ಮತ್ತು ಸಹೋದರರು, ಕೃಷ್ಣ ಅಡಪ ರವರು ದಾನವಾಗಿ ನೀಡಿದ ಜಾಗದಲ್ಲಿ ೧೯೯೪ ರಲ್ಲಿ ದೈವಸ್ಥಾನ ಮತ್ತು ನಾಗಬನ ನಿರ್ಮಾಣ ಮಾಡಿ ಬ್ರಹ್ಮ ಕಲಶವನ್ನು ನೆರವೇರಿಸಲಾಯಿತು. ೨೦೦೨ ರಿಂದ ಕುಟುಂಬದ ಕಾರ್ಯಕಾರಿ ಸಮಿತಿಯ ಜವಾಬ್ದಾರಿಯನ್ನು ವಹಿಸಿಕೊಂಡು ಕುಟುಂಬಿಕರ ಸಹಕಾರದೊಂದಿಗೆ ಹೊಸ ತರವಾಡು ಮನೆ, ರಂಗ ಮಂಟಪ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೈವಗಳ ಪ್ರೇರಣೆಯಂತೆ ದೈವಸ್ಥಾನ ಮತ್ತು ನಾಗದೇವರ ಸಾನಿಧ್ಯವನ್ನು ಜೀರ್ಣೋದ್ದಾರ ಮಾಡುವ ಬಗ್ಗೆ ಕುಟುಂಬದ ಹಿರಿಯವರಾದ ಸೀತಾರಾಮ ಅಡ್ಯಂತಾಯ ಬೋಳಂತ್ತೂರು ಗುತ್ತು, ವೆಂಕಪ್ಪ ಆಳ್ವ ಕುರಿಯ, ವಾಸುದೇವ ಶೆಟ್ಟಿ ಪಲ್ಲತಡ್ಕ, ಪದ್ಮನಾಭ ಕಾಜವ ಕೆಂಜಲ, ಕೃಷ್ಣ ಶೆಟ್ಟಿ ಕನಾರು, ಸದಾಶಿವ ಆಳ್ವ ಬಾಳೆಪುಣಿಗುತ್ತು, ಶಿಧರ ಶೆಟ್ಟಿ ಹಿನಾರಿ ಮತ್ತು ಕುಟುಂಬಿಕರನ್ನು ಒಟ್ಟು ಸೇರಿಸಿ ದೈವ ದೇವರ ಜೀರ್ಣೋದ್ಧಾರ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನ ಕೈಗೊಂಡು, ಪಯ್ಯನೂರು ಮಾಧವ ಪೊದುವಾಳರ ಮೂಲಕ ತಾಂಬೂಲ ಪುನಃ ಪ್ರಶ್ನಾ ಚಿಂತನೆಯನ್ನು ನಡೆಸಿ ನೂತನ ದೈವಸ್ಥಾನದ ಕೆಲಸವನ್ನು ಪ್ರಾರಂಭ ಮಾಡಲಾಯಿತು ಎಂದು ತಿಳಿಸಿದರು.

ಕುಟುಂಬಿಕರಾದ ಪಟ್ಲ ಸತೀಶ್ ಶೆಟ್ಟಿ, ದೇವರಾಜ್ ರೈ ಸುರಿಬೈಲು, ವಿಶ್ವನಾಥ ಆಳ್ವ ನಾಡಾಜೆ, ರಾಧಕೃಷ್ಣ ಅಡ್ಯಂತಾಯ ಕಲ್ಯಾರು, ಪುಷ್ಪರಾಜ್ ಅಡ್ಯಂತಾಯ ಕಲ್ಕಾರು, ರತ್ನಾಕರ ಅಡಪ ಕಲ್ಯಾರು, ರವಿ ರೈ ಕಳಸ, ಸುಧಾಕರ ಶೆಟ್ಟಿ ನಾಡಾಜಿ, ಸುನಾದ್ ರಾಜ್ ಶೆಟ್ಟಿ ಬೊಂಡಾಲ ಅಂತರಗುತ್ತು, ರಾಮ್ ಪ್ರಸಾದ್ ರೈ, ಮಹೇಶ್ ಆಳ್ವ ಉಪಸ್ಥಿತರಿದ್ದರು.