ಸರಗೂರು: ತಾಲೂಕಿನ ಇಟ್ನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆರ್.ಕಾಳಿಂಗನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ಆರ್.ಕಾಳಿಂಗ ನಾಯಕ ಅವರನ್ನು ಹೊರತುಪಡಿಸಿ ಉಳಿದವರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಆರ್.ಕಾಳಿಂಗನಾಯಕ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀಧರ್‌ಮೂರ್ತಿ ಘೋಷಣೆ ಮಾಡಿದರು.
ಉಪಾಧ್ಯಕ್ಷೆ ಗೌರಮ್ಮ, ಮಾಜಿ ಅಧ್ಯಕ್ಷ ಜಯರಾಮ, ಎಸ್.ಚನ್ನನಾಯಕ, ಸವಿತಾ ಸಿದ್ದನಾಯಕ, ಗೀತಾ ಬೆಟ್ಟನಾಯಕ, ಶಿವಮ್ಮ ಈರನಾಯಕ, ಗ್ರಾಮದ ಮುಖಂಡರಾದ ಎನ್.ಬಸವನಾಯಕ, ವಿ.ಸಿದ್ದರಾಜು, ಬಿ.ಬಸವರಾಜು, ಮಾಜಿ ಯಜಮಾನ ಲಿಂಗರಾಜು, ಚಾಮನಾಯಕ, ರಾಮನಾಯಕ, ಹೂವಿನ ವ್ಯಾಪಾರಿ ಈರನಾಯಕ, ಕರಿನಾಯಕ, ಬೆಟ್ಟನಾಯಕ, ಪಿಡಿಒ ಚಿನ್ನಸ್ವಾಮಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.