ಜಿಲ್ಲೆ

ಮಾತೆಯರೇ ಮಕ್ಕಳ ಸಂಸ್ಕಾರಕ್ಕೆ ಬುನಾದಿ ಜ್ಞಾನ ವಿಕಾಸ ಶಿಬಿರದಲ್ಲಿ ಮೌನೇಶ್ ಶರ್ಮಾ ಹೇಳಿಕೆ

ಹರೀಶ ಎಂ.

ಮಂಗಳೂರು: ಎಳೆಯ ಮಕ್ಕಳಿಗೆ ತಾಯಂದಿರೇ ಸಂಸ್ಕಾರವನ್ನು ಕಲಿಸಲು ಭದ್ರ ಬುನಾದಿಯಾಗಬಲ್ಲರು, ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇದು ಅತ್ಯಂತ ಆವಶ್ಯಕವಾದ ಸಂಗತಿಯಾಗಿದೆ ಎಂದು ಪಡುಕುತ್ಯಾರಿನ ಮೌನೇಶ್ ಶರ್ಮಾ ಹೇಳಿದರು.


ನಗರದ ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಜ್ಞಾನ ವಿಕಾಸ ಶಿಬಿರದಲ್ಲಿ ಕಾರ್ಯಕ್ರಮದಲ್ಲಿ ಮಾತೃ ಪೂಜನದ ವೈಶಿಷ್ಟೃತೆ ಹಾಗೂ ಮಹತ್ವದ ಕುರಿತು ಅವರು ವಿವರಿಸಿದರು.


ಮಂಗಳೂರಿನ ಉದ್ಯಮಿ ಮಹೇಂದ್ರ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಬೆಳುವಾಯಿ ಸುಂದರ ಆಚಾರ್ಯ, ವೈ.ಎನ್.ತಾರಾನಾಥ ಆಚಾರ್ಯ,ಟಿ. ಜಯಕರ ಆಚಾರ್ಯ, ಉಪೇಂದ್ರ ಆಚಾರ್ಯ ಪಚ್ಚನಾಡಿ,ಗುರುಸೇವಾ ಪರಿಷತ್ ನ ಪದಾಧಿಕಾರಿಗಳಾದ ಗಣೇಶ ಆಚಾರ್ಯ ಕೆಮ್ಮಣ್ಣು,ಶೇಖರ ಆಚಾರ್ಯ ಮಂಗಳಾದೇವಿ, ಗುರುರಾಜ್ ಕೆ.ಜೆ, ಸತೀಶ್ ಆಚಾರ್ಯ ಸುರುಳಿ, ಪ್ರಕಾಶ್ ಆಚಾರ್ಯ ಹಲೇಜಿ ಮೊದಲಾದವರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳೆಲ್ಲರೂ ತಮ್ಮ ಮಾತೆಯರ ಪಾದಪೂಜೆ ಗೈದು ತಾಯಂದಿರ ಆಶೀರ್ವಾದ ಪಡೆದುಕೊಂಡರು.